ಪೊಲೀಸ್ ಠಾಣೆ ಮೆಟ್ಟಿಲೇರಿದ ಶಕುಂತಲಾ ದೇವಿ

Shakuntala Devi
ಬೆಂಗಳೂರು, ನ.1: ಖ್ಯಾತ ಸಂಖ್ಯಾಶಾಸ್ತ್ರಜ್ಞೆ ಹಾಗೂ ಜ್ಯೋತಿಷಿ ಶಕುಂತಲಾ ದೇವಿ ಅವರು ತಮ್ಮ ಉದ್ಯೋಗಿ ಸುಮನಾ ಎಂಬುವವರ ಮೇಲೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ಪೊಲೀಸ್ ತನಿಖೆಯಲ್ಲಿ ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ.

ಶಕುಂತಲಾ ದೇವಿ ಅವರು ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ, ಸುಮನಾ ಅವರು ರು.6 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಹಾಗೂ ರು.80,000 ನಗದನ್ನು ತಮ್ಮ ಮನೆಯಲ್ಲಿ ಕಳುವು ಮಾಡಿದ್ದಾರೆ. ಊಟದಲ್ಲಿ ಮತ್ತು ಪದಾರ್ಥ ಬೆರೆಸಿ ಹಣವನ್ನು ಲಪಟಾಯಿಸಲಾಗಿದೆ ಎಂದು ಶಂಕುತಲಾ ದೇವಿ ಆರೋಪಿಸಿದ್ದಾರೆ.

ತನಿಖೆ ನಡೆಸಿರುವ ಪೊಲೀಸರು, ಸುಮನಾ ವಿರುದ್ಧ ನಮಗೆ ಇದುವರೆಗೂ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದು ಪೊಲೀಸ್ ಉಪ ಆಯುಕ್ತ (ದಕ್ಷಿಣ ವಿಭಾಗ) ಸೋನಿಯಾ ನಾರಂಗ್ ತಿಳಿಸಿದ್ದಾರೆ. ಸುಮನಾ ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ. ತಮ್ಮ ಬಾಕಿ ವೇತನ ಕೊಡುವಂತೆ ಒತ್ತಡ ಹೇರಿದ್ದಕ್ಕೆ ಅವರು ಈ ರೀತಿ ಸುಳ್ಳು ದೂರನ್ನು ಕೊಟ್ಟಿರುವುದಾಗಿ ಅವರು ತಿಳಿಸಿದ್ದಾರೆ.

ತಾವು ಅನಾರೋಗ್ಯದಿಂದ ಬಳಲುತ್ತಿದ್ದು ಬಸವನಗುಡಿ ಕಚೇರಿಗೆ ಸುಮನಾ ಅವರನ್ನು ಒಂದು ತಿಂಗಳ ಹಿಂದೆ ನೇಮಕ ಮಾಡಿಕೊಂಡಿದ್ದೆ. ಅವರನ್ನು ಸಹಾಯಕಿ ಅಥವಾ ಪರಿಚಾರಕಿಯಾಗಿ ಅಲ್ಲದೆ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿಕೊಂಡಿದ್ದೆ ಎಂದು ಶಕುಂತಲಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಆದರೆ ತಮಗೆ ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ ಎಂದಿದ್ದಾರೆ ಸುಮನಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+