ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಾಕ್ ಒಬಾಮಾ ಭಾರತ ಭೇಟಿ ವೇಳಾಪಟ್ಟಿ

By Mahesh
|
Google Oneindia Kannada News

Barack Obama Schedule
ಮುಂಬೈ, ಅ.29: ನವೆಂಬರ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಪ್ರವಾಸ ಕಾರ್ಯಕ್ರಮದಲ್ಲಿ ಕೊಂಚ ಬದಲಾವಣೆಗಳಾಗಿವೆ. ಅವರು ತಮ್ಮ ಭೇಟಿ ವೇಳೆ ರಾಷ್ಟ್ರಪಿತ ಮಹಾತ್ಮಗಾಂಧಿ ಸಮಾಧಿ ಸ್ಥಳವಾದ ರಾಜ್‌ಘಾಟ್‌ಗೆ ಭೇಟಿ ನೀಡಲಿದ್ದಾರೆ.

ಗಾಂಧೀಜಿಯವರು ಇಡೀ ಅಮೆರಿಕನ್ನರಿಗೆ ಸ್ಫೂರ್ತಿ ನೀಡುವ ವ್ಯಕ್ತಿ. ಕೇವಲ ಭಾರತೀಯರಿಗಲ್ಲದೇ ಆಫ್ರಿಕಾ ಹಾಗೂ ಅಮೆರಿಕನ್ನರಿಗೂ ಆದರ್ಶಪ್ರಾಯವಾಗಿರುವ ಅಧ್ಯಕ್ಷರು ವೈಯುಕ್ತಿಕವಾಗಿ ಗಾಂಧಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಲು ಆಸಕ್ತಿ ಹೊಂದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನವೆಂಬರ್ 6: ಭಾರತಕ್ಕೆ ಆಗಮಿಸುವ ಒಬಾಮಾ ದಕ್ಷಿಣ ಮುಂಬೈನಲ್ಲಿರುವ ಮಣಿ ಭವನದಲ್ಲಿರುವ ಗಾಂಧಿ ಮ್ಯೂಸಿಯಂಗೂ ಭೇಟಿ ನೀಡಲಿದ್ದಾರೆ. ಅಲ್ಲದೇ ಅವರು ತಂಗಲಿರುವ ಹೊಟೇಲ್ ತಾಜ್‌ನಲ್ಲಿ ಮುಂಬೈ ದಾಳಿಗೆ ಬಲಿಯಾದ ಕುಟುಂಬಸ್ಥರಿಗೆ ಶ್ರದ್ಧಾಂಜಲಿ ಸಲ್ಲಿಸಿ ಹೇಳಿಕೆ ನೀಡಲಿದ್ದಾರೆ.

ಅಧ್ಯಕ್ಷರು ತಂಗಲಿರುವ ತಾಜ್ ಹೊಟೇಲ್ 26/11ರ ದಾಳಿಗೆ ತುತ್ತಾದ ಕಟ್ಟಡಗಳಲ್ಲಿ ಒಂದಾಗಿದ್ದು, ಶ್ರದ್ಧಾಂಜಲಿ ನಂತರ ಗೆಸ್ಟ್‌ಬುಕ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಬರೆಯಲಿದ್ದಾರೆ ಎಂದು ಅಧಿಕೃತ ಮೂಲಗಳು ಖಾತ್ರಿಪಡಿಸಿವೆ.

ನಂತರ ಅವರು ಯುಎಸ್ - ಇಂಡಿಯಾ ಬಿಸಿನೆಸ್ ಕೌನ್ಸಿಲ್ ಏರ್ಪಡಿಸಿರುವ ಬಿಸಿನೆಸ್ ಸಮ್ಮಿಟ್‌ನಲ್ಲೂ ಪಾಲ್ಗೊಳ್ಳಲಿದ್ದಾರೆ. ಪ್ರಮುಖವಾಗಿ ಅಂದು ಮೂರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವರು, ಅಮೆರಿಕ ಮೂಲದ ಸಿಇಒ ಏರ್ಪಡಿಸಿರುವ ರೌಂಡ್‌ಟೇಬಲ್ ಸಮ್ಮಿಟ್‌ನಲ್ಲೂ ಭಾಗವಹಿಸಲಿದ್ದಾರೆ.

ನವೆಂಬರ್ 7: ಮುಂಬೈನಲ್ಲಿ ತಂಗಲಿರುವ ಒಬಾಮಾ, ಈಸಂದರ್ಭದಲ್ಲಿ ಶಾಲೆಯೊಂದಕ್ಕೆ ಭೇಟಿ ನೀಡಲಿದ್ದಾರೆ. ಮರುದಿನ ಮುಂಜಾನೆ ಶಾಲೆಗೆ ಭೇಟಿ ನೀಡಲಿದ್ದು, ಅಲ್ಲಿಯೇ ದೀಪಾವಳಿ ಸಂಭ್ರಮವನ್ನು ಆಚರಿಸಲಿದ್ದಾರೆ. ತದನಂತರ ನೇರವಾಗಿ ಟೌನ್‌ಹಾಲ್ ಗೆ ಭೇಟಿ ನೀಡಲಿರುವ ಅವರು, ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾರತ - ಅಮೆರಿಕ ನಡುವಿನ ಭವಿಷ್ಯದ ಸಹಭಾಗಿತ್ವದ ಕುರಿತಂತೆ ಮಾತು ಕತೆ ನಡೆಸಲಿದ್ದಾರೆ.

ನವೆಂಬರ್ 8: ನವದೆಹಲಿಗೆ ಪ್ರಯಾಣ ಬೆಳಸಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಲಿದ್ದಾರೆ. ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಒಬಾಮಾ ಮಾಡುವ ಭಾಷಣ ದಿನದ ವಿಶೇಷ. ಮನಮೋಹನ್ ಸಿಂಗ್ ಅವರು ಆಯೋಜಿಸಿರುವ ರಾತ್ರಿ ಭೋಜನ ಸ್ವೀಕರಿಸಲಿದ್ದಾರೆ.

ನವೆಂಬರ್ 9 : ಬೀಳ್ಕೊಡುಗೆ, ಬೆಳಗ್ಗೆ ದೆಹಲಿಯಿಂದ ಅಮೆರಿಕಾಗೆ ಪಯಣ ಬೆಳೆಸಲಿದ್ದಾರೆ.


ವಿಡಿಯೋಗಳು:
.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |
ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X