ಅನರ್ಹ ಪಕ್ಷೇತರ ಶಾಸಕರಿಂದ ಮತ್ತೊಂದು ತಕರಾರು

Former Minister Goolihatti Shekhar
ಬೆಂಗಳೂರು, ಅ. 28 : ಅನರ್ಹಗೊಂಡಿರುವ ಐವರು ಪಕ್ಷೇತರ ಶಾಸಕರು ಹೈಕೋರ್ಟ್‌ಗೆ ಬುಧವಾರ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ಪಕ್ಷೇತರರ ಕ್ಷೇತ್ರದ ಮತದಾರರು ಸ್ಪೀಕರ್‌ಗೆ ನೀಡಿದ ಆಕ್ಷೇಪಣೆ ಪತ್ರದ ಮೇರೆಗೆ ಶಾಸಕರನ್ನು ಅನರ್ಹಗೊಳಿಸಲಾಗಿತ್ತು.

ಆದರೆ, ಈ ಹಿಂದೆ ಸಲ್ಲಿಸಿದ್ದ ಅರ್ಜಿಯಲ್ಲಿ ಐವರು ಮತದಾರರನ್ನು ಪ್ರತಿವಾದಿಯಾಗಿಸಿರಲಿಲ್ಲ. ನೂತನವಾಗಿ ಸಲ್ಲಿಸಿರುವ ಅರ್ಜಿಯಲ್ಲಿ ಸ್ಪೀಕರ್ ಕೆ.ಜಿ.ಬೋಪಯ್ಯ, ಮತದಾರರಾದ ಇ.ಯಮನಪ್ಪ, ಎಸ್.ಎಂ.ಬಸವರಾಜ್, ಟಿ.ಟಿ.ನಾಗರಾಜ್, ಕೃಷ್ಣ ನಾಯಕ್ ಹಾಗೂ ಕೆ.ಎಲ್. ಚೆನ್ನೇಗೌಡ ಅವರನ್ನು ಪ್ರತಿವಾದಿಯಾಗಿಸಲಾಗಿದೆ.

ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಿ.ಟಿ. ರವಿ ಹಾಗೂ ಜೀವರಾಜ್ ಸೇರಿದಂತೆ ಹತ್ತು ಪ್ರತಿವಾದಿ ಗಳಾದಂತಾಗಿದೆ. ನ.2 ರಂದು ಅರ್ಜಿ ಪ್ರತ್ಯೇಕ ವಿಭಾಗೀಯ ಪೀಠದ ಎದುರು ಬರಲಿದೆ. ಈ ಹಿಂದೆ ಪಕ್ಷೇತರರ ಅರ್ಜಿಯನ್ನು ಮು.ನ್ಯಾ.ಜೆ.ಎಸ್.ಕೇಹರ್ ಹಾಗೂ ಎನ್ .ಕುಮಾರ್ ಅವರ ವಿಭಾಗೀಯ ಪೀಠ ವಿಚಾರಿಸುತ್ತಿತ್ತು. ಕಳೆದ ಅ.೧೮ ರಂದು ಈ ಅರ್ಜಿಯನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸಲಾಗಿತ್ತು.

ಅರ್ಜಿಯಲ್ಲಿ ಮತ್ತೇನಿದೆ?

* ಮತದಾರರು ರಾಜ್ಯದ ನಾನಾ ಭಾಗಗಳಿಂದ ಬಂದಿದ್ದರೂ, ಎಲ್ಲರ ಅರ್ಜಿಯಲ್ಲಿ ಒಂದೇ ತೆರನಾದ ವಾದಗಳಿವೆ. ಇದರಿಂದ ಇದು ಬೋಗಸ್ ಅರ್ಜಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
* ಸದನದ ಸದಸ್ಯರಲ್ಲದವರು ಶಾಸಕರನ್ನು ಅನರ್ಹಗೊಳಿಸಿ ಎಂದು ಸ್ಪೀಕರ್‌ಗೆ ಆಕ್ಷೇಪ ಪತ್ರ ಸಲ್ಲಿಸಿದ್ದಾರೆ. ಇದನ್ನು ಪರಿಗಣಿಸಿರುವುದು ನಿಯಮ ಬಾಹಿರ.
* ಐವರು ಮತದಾರರು ತಮ್ಮ ಪತ್ರದಲ್ಲಿ ಐವರು ಶಾಸಕರು ಸರಕಾರಕ್ಕೆ ಬೆಂಬಲ ನೀಡಿದ ದಿನವೇ ಅನರ್ಹಗೊಳ್ಳಬೇಕಿತ್ತು ಎಂದು ತಿಳಿಸಿದ್ದಾರೆ. ಹಾಗಾದರೆ, ಸರಕಾರ ಅಲ್ಪಮತದಲ್ಲಿ ಎರಡೂವರೆ ವರ್ಷ ಕಳೆಯಿತು ಎಂದಾಯಿತು.
* ಪಕ್ಷೇತರ ಶಾಸಕರನ್ನು ಸದನದೊಳಗೆ ಬಿಡಬೇಡಿ ಎಂದು ಅ.10ರಂದೇ ಮುಖ್ಯಮಂತ್ರಿ ಪೊಲೀಸರಿಗೆ ತಿಳಿಸಿದ್ದರು. ಆದರೆ, ಶಾಸಕರು ಅನರ್ಹಗೊಂಡಿದ್ದು ಮರುದಿನ ಬೆಳಗ್ಗೆ 5 ಗಂಟೆಗೆ. ಮುಖ್ಯಮಂತ್ರಿ ಹಾಗೂ ಸ್ಪೀಕರ್ ಶಾಸಕರ ಅನರ್ಹತೆ ವಿಷಯದಲ್ಲಿ ದುರುದ್ದೇಶ ಹೊಂದಿರುವುದು ಸ್ಪಷ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+