ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮನ್ನು ಕೊಂದರೆ ನಿಮ್ಮನ್ನು ಸುಮ್ಮನೆ ಬಿಡಲ್ಲ : ಆಲ್ ಖೈದಾ

By Mrutyunjaya Kalmat
|
Google Oneindia Kannada News

Osama Bin Laden
ಕೈರೊ, ಅ. 28 : ಅಮೆರಿಕ ನೇತೃತ್ವದ ಅಫ್ಘಾನಿಸ್ತಾನ ಸಮರಕ್ಕೆ ಬೆಂಬಲ ನೀಡಿರುವ ಹಾಗೂ ಬುರ್ಖಾ ನಿಷೇಧದ ಹೊಸ ಕಾನೂನನ್ನು ಜಾರಿಗೊಳಿಸಿರುವ ಫ್ರಾನ್ಸ್‌ನ ಕ್ರಮದ ವಿರುದ್ಧ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಅಲ್ಲಿನ ಜನರನ್ನು ಹತ್ಯೆಗೈಯುವುದಾಗಿ ಅಲ್ ಖೈದಾ ಮುಖಂಡ ಉಸಾಮಾ ಬಿನ್ ಲಾಡೆನ್ ಬೆದರಿಕೆ ಹಾಕಿದ್ದಾನೆ.

ಅಫ್ಘಾನ್ ಸಮರದ ಹೆಸರಿನಲ್ಲಿ ಫ್ರಾನ್ಸ್ ಮುಸ್ಲಿಂ ಮಹಿಳೆಯರು ಹಾಗೂ ಮಕ್ಕಳನ್ನು ಹತ್ಯೆಗೈಯಲು ಅಮೆರಿಕನ್ನರಿಗೆ ನೆರವು ನೀಡುತ್ತಿದೆ ಎಂದು ಅಂತರ್ಜಾಲ ತಾಣವೊಂದರಲ್ಲಿ ಒದಗಿಸಲಾಗಿರುವ ಧ್ವನಿಸುರುಳಿಯಲ್ಲಿ ಲಾಡೆನ್ ತಿಳಿಸಿರುವುದಾಗಿ ವರದಿಯಾಗಿದೆ. ಕಳೆದ ತಿಂಗಳು ಆಫ್ರಿಕದಲ್ಲಿ ಐದು ಮಂದಿ ಫ್ರಾನ್ಸ್‌ನ ಜನರನ್ನು ಅಪಹರಣ ನಡೆಸಿರುವ ಕ್ರಮವು ಮುಸ್ಲಿಮರನ್ನು ದಮನಿಸುವ ಫ್ರಾನ್ಸ್‌ನ ನೀತಿಗೆ ಒಂದು ಪ್ರತಿಕ್ರಿಯೆಯಾಗಿದೆ ಎಂದು ಆತ ಹೇಳಿದ್ದಾನೆ.

ನಮ್ಮ ನೆಲದ ಕಾರ್ಯದಲ್ಲಿ ನೀವು ಮೂಗು ತೂರಿಸುವುದು ಎಷ್ಟು ಸರಿ? ನಮ್ಮ ಮಹಿಳೆಯರು ಹಾಗೂ ಮಕ್ಕಳನ್ನು ಹತ್ಯೆಗೈಯುವ ಜೊತೆಯಲ್ಲೇ ಶಾಂತಿಯಲ್ಲಿ ಬದುಕಬೇಕೆಂದು ಬಯಸುವುದಕ್ಕೆ ಏನರ್ಥವಿದೆ" ಎಂದು ಲಾಡೆನ್ ಧ್ವನಿಸುರುಳಿಯಲ್ಲಿ ಫ್ರಾನ್ಸ್ ಜನತೆಯನ್ನುದ್ದೇಶಿಸಿ ಕೇಳಿರುವುದಾಗಿ ವರದಿ ತಿಳಿಸಿದೆ. ಇದೊಂದು ಸರಳ ಸಮೀಕರಣವಾಗಿದೆ. ನೀವು ಕೊಂದಲ್ಲಿ, ನೀವೂ ಕೊಲ್ಲಲ್ಪಡುತ್ತೀರಿ. ನೀವು ಬಂಧಿಸಿದಲ್ಲಿ ನೀವೂ ಸೆರೆಯಾಗುತ್ತೀರಿ. ನಮ್ಮ ಭದ್ರತೆಯ ನಿಟ್ಟಿನಲ್ಲಿ ಬೆದರಿಕೆಯೊಡ್ಡಿದಲ್ಲಿ, ನಿಮ್ಮ ಭದ್ರತೆಗೂ ಬೆದರಿಕೆ ತಟ್ಟಲಿದೆ ಎಂದು ಲಾದೆನ್ ವಿವರಿಸಿದ್ದಾನೆ ಎನ್ನಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X