ವೊಡಾಫೋನ್ ವೈಸ್ ಪ್ರೆಸಿಡೆಂಟ್ ಚಂದ್ರಮೌಳಿ ಆತ್ಮಹತ್ಯೆ
ಮುಂಬೈ,
ಅ.23: ಪ್ರಮುಖ ಮೊಬೈಲ್ ಸೇವಾ ಕಂಪನಿ ವೊಡಾಫೋನ್‌ನಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಚಂದ್ರಮೌಳಿ ಅಯ್ಯರ್ (47) ಶನಿವಾರ(ಅ.23) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ತ್ರಿಮೂರ್ತಿ ಹೌಸಿಂಗ್ ಸೊಸೈಟಿಯ ಫ್ಲಾಟ್‌ನಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. id="toptextpromo">ಮುಂಬೈ
ಸಾಂತಾಕ್ರೂಜ್ ಪೊಲೀಸ್ ಮೂಲಗಳ ಪ್ರಕಾರ, ಚಂದ್ರಮೌಳಿ ಅವರನ್ನು ಭೇಟಿ ಮಾಡಲು ಅವರ ಮನೆಗೆ ಗೆಳೆಯನೊಬ್ಬ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಗೊತ್ತಾಗಿದೆ. ಮುಂಬೈನಲ್ಲಿ ಅವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು . ಮರಣೋತ್ತರ ಪರೀಕ್ಷೆಗಾಗಿ ಅವರ ದೇಹವನ್ನು ಸಮೀಪ ಆಸ್ಪತ್ರೆಗೆ ಒಯ್ಯಲಾಯಿತು. id='are-slot-1' class='oiad oi-axt oiadv'> id='top-searched-articles'>ಚಂದ್ರಮೌಳಿ
ಆತ್ಮಹತ್ಯೆ ಮಾಡಿಕೊಳ್ಳಲು ಬಲವಾದ ಕಾರಣ ಏನಿತ್ತು ಎಂಬುದು ತಿಳಿದುಬಂದಿಲ್ಲ. ಸಾಂತಾಕ್ರೂಜ್‌ನ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮಧುಕರ್ ಚೌದರಿ ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆ ಬಗ್ಗೆ ಚಂದ್ರಮೌಳಿ ಸಂಬಂಧಿಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.











Click it and Unblock the Notifications