ತಾಯಿ ಆಣೆಗೂ ಪಕ್ಷಕ್ಕೆ ದ್ರೋಹ ಬಗೆದಿಲ್ಲ :ರೇಣುಕಾ

MP Renukacharya
ಬೆಂಗಳೂರು, ಅ.21: ರೇಣುಕಾಚಾರ್ಯ ಬಾಯ್ಬಿಟ್ಟರೆ ಸಾಕು, ಎಣ್ಣೆ ಹೊಡಿಯದಿದ್ದರೂ ಕಿಕ್ ಹೊಡೆಯುತ್ತೆ, ಅಬ್ಬಾ ಏನು ಟ್ವಿಸ್ಟ್, ಏನು ಟರ್ನ್, ರಾಜಕೀಯ ರಿಯಾಲಿಟಿ ಷೋ ಟಿಆರ್ ಪಿ ಹೆಚ್ಚುವುದಕ್ಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅಬಕಾರಿ ಸಚಿವ ರೇಣುಕಾಚಾರ್ಯಜೀ ಅವರೇ ಕಾರಣ ಎಂದರೆ ತಪ್ಪಾಗಲಾರದು. 16 ಜನ ಬಂಡಾಯಗಾರರನ್ನು ಕಟ್ಟಿಕೊಂಡು 'ಜನ'ನಾಯಕನಾಗ ಹೊರಟವ ಇಮ್ದು ತಾಯಿ ಆಣೆಗೂ ನಾನು ಪಕ್ಷ ವಿರೋಧಿಯಲ್ಲ, ನಾನು ಸರ್ಕಾರ ಬೀಳಿಸೋಕೆ ಹೋಗಲಿಲ್ಲ. ಭಿನ್ನಮತೀಯನಲ್ಲ ನಾನು ಸಿಎಂ ಅವರ ಸಿಕ್ರೇಟ್ ಏಜೆಂಟ್ ಅಂದು ಬಿಟ್ಟಿದ್ದಾರೆ. ರೇಣುಕಾರ ವರಸೆಗೆ ಮಾಧ್ಯಮ ಮಿತ್ರರು ತಬ್ಬಿಬ್ಬಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಯಾವ ಭಗವಂತನ ಮೇಲೆ ಆಣೆ ಮಾಡಿ ಹೇಳುತ್ತೇನೆ ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಬಂಡಾಯ ಶಾಸಕರೊಂದಿಗೆ ಚೆನ್ನೈ, ಗೋವಾ ದಲ್ಲಿದ್ದದ್ದು, ಕೇವಲ ಅವರ ಮನಪರಿವರ್ತಿಸಿ, ಅವರನ್ನು ಮತ್ತೆ ಸರಕಾರದೊಂದಿಗೆ ಕರೆತರುವ ಉದ್ದೇಶಕ್ಕಾಗಿ ನಾನು ಅವರ ಜೊತೆಗೆ ಹೋಗಿದ್ದೆ

ಆದರೆ, ರಾಜ್ಯಪಾಲರಿಗೆ ಬೆಂಬಲ ವಾಪಾಸ್ ಪತ್ರ ನೀಡಿದ್ದೇಕೆ ಎಂದು ಪ್ರಶ್ನಿಸಿದಾಗ, ಕೊಂಚ ತಬ್ಬಿಬ್ಬಾದ ರೇಣುಕಾಚಾರ್ಯ, ಸಹಿ ಹಾಕಿದ್ದು ನಾನೇ, ಆದರೆ, ಬೇಳೂರು ಸೇರಿದಂತೆ ನಮ್ಮ ಸ್ನೇಹಿತರ ಒತ್ತಡಕ್ಕೆ ಮಣಿದು ಪತ್ರಕ್ಕೆ ಸಹಿ ಹಾಕಿದೆ ಅಷ್ಟೇ. ನನಗೆ ಅದು ರಾಜ್ಯಪಾಲರಿಗೆ ನೀಡುವ ಪತ್ರ ಎಂದು ತನಗೆ ಗೊತ್ತಿರಲಿಲ್ಲ ಎಂದು ಅಮಾಯಕತ್ವದ ಪ್ರದರ್ಶನ ಮಾಡಿದರು.

ಆದರೆ, ಮಾಧ್ಯಮದವರ ಪ್ರಶ್ನೆಗಳ ಸುರಿಮಳೆ ತಾಳಲಾರದೆ, ಸುದ್ದಿಗೋಷ್ಠಿಯನ್ನು ಅರ್ಧಕ್ಕೆ ಮುಗಿಸಿ ಎದ್ದ ಸಚಿವರ ಮೇಲೆ ಸುದ್ದಿಗಾರರಿಗೇನು ಮುನಿಸಾಗಲಿಲ್ಲ. ಕಾರಣ, ಹೊನ್ನಾಳಿ ವೀರನ ನುಡಿಮುತ್ತುಗಳು ಅದೇ ಹಳೆ ಗ್ರಾಮಾಫೋನ್ ರೆಕಾರ್ಡ್ ನಂತೆ ಸುತ್ತುತ್ತಲೇ ಇತ್ತು.

ವಿಡಿಯೋಗಳು: ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು | ರಿಂಗ ರಿಂಗಾ ಸಾಂಗ್ ಪಾಲಿಟಿಕ್ಸ್ ಮಿಕ್ಸ್ |

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ| ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+