ಕಸಬ್ ಗಲ್ಲು ಪುರಸ್ಕರಿಸುವುದೇ ಮುಂಬೈ ಹೈಕೋರ್ಟ್?

Ajmal Amir Kasab
ಮುಂಬೈ, ಅ. 18 : ಮುಂಬೈ ಭಯೋತ್ಪಾದಕ ದಾಳಿಗಾಗಿ ಪಾಕಿಸ್ತಾನಿ ಉಗ್ರ ಅಜ್ಮಲ್ ಕಸಬ್ ಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯನ್ನು ಕಾಯಂ ಮಾಡುವ ಕುರಿತಂತೆ ಮುಂಬೈ ಹೈಕೋರ್ಟಿನಲ್ಲಿ ವಿಚಾರಣೆ ಇಂದು ಶುರುವಾಗಲಿದೆ.

ನ್ಯಾಯಾಲಯದ ಸುತ್ತಮುತ್ತ ಭಾರೀ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಕಸಬ್ ಗೆ ಪ್ರಾಣಾಪಾಯವಿರುವುದರಿಂದ ಆತನನ್ನು ನ್ಯಾಯಾಲಯಕ್ಕೆ ತರದೆ, ವಿಡಿಯೋ ಕಾನ್ಫರೆನ್ಸ್ ಮುಖಾಂತರ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ನ್ಯಾಯಮೂರ್ತಿ ರಂಜನಾ ದೇಸಾಯಿ ಮತ್ತು ನ್ಯಾ. ಆರ್ ವಿ ಮೋರೆ ಇರುವ ನ್ಯಾಯಪೀಠ ಮತ್ತು ಕಬಸ್ ಇರುವ ಬಂದಿಖಾನೆಯಲ್ಲಿ ಸ್ಕ್ರೀನ್ ಗಳನ್ನು ಅಳವಡಿಸಲಾಗಿದೆ.

2008ರ ನವೆಂಬರ್ 26ರಂದು ನಡೆದ ಹತ್ಯಾಕಾಂಡದಲ್ಲಿ ಸೆರೆಸಿಕ್ಕಿರುವ ಏಕೈಕ ಉಗ್ರ ಕಸಬ್, ಛತ್ರಪತಿ ಶಿವಾಜಿ ರೇಲ್ವೆ ಟರ್ಮಿನಸ್ ಮತ್ತು ಕಾಮಾ ಆಸ್ಪತ್ರೆಯಲ್ಲಿ ನಡೆದ ದಾಳಿಗಳು ಭಯೋತ್ಪಾದಕ ದಾಳಿಗೆ ಸಂಬಂಧಿಸಿದ್ದಲ್ಲವೆಂದು ಹೇಳಿದ್ದು, ಮೇ 6ರಂದು ವಿಶೇಷ ನ್ಯಾಯಾಲಯ ನೀಡಿರುವ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿದ್ದಾನೆ.

ಮೊದಲು ಸರಕಾರಿ ವಕೀಲ ಉಜ್ವಲ್ ನಿಕಂ ತಮ್ಮ ವಾದಗಳನ್ನು ಮಂಡಿಸಿದ ನಂತರ ಅಜ್ಮಲ್ ಕಬಸ್ ಮೇಲ್ಮನವಿ ಬಗ್ಗೆ ಹೈಕೋರ್ಟ್ ವಿಚಾರಣೆ ನಡೆಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+