ಬ್ರಾಹ್ಮಣ ನ್ಯಾಯಾಧೀಶ ಬೇಡ: ದಲಿತನ ಮೊರೆ

ಜುನಾಗಢ ಜಿಲ್ಲಾ ನ್ಯಾಯಾಧೀಶರೊಬ್ಬರ ವಿರುದ್ಧ ಅತುಲ್ ರಾಮ್ ಜಿಭಾಯ್ ಮಕ್ವಾನಾ ಎಂಬವರು ದೂರು ದಾಖಲಿಸಿದ್ದರು. ಮೂರನೆ ದರ್ಜೆ ಹಾಗೂ ನಾಲ್ಕನೆ ದರ್ಜೆಯ ಹುದ್ದೆಗಳನ್ನು ನೀಡುವಾಗ ಬ್ರಾಹ್ಮಣರಿಗೆ ಆದ್ಯತೆ ನೀಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಈ ದೂರು ದಾಖಲಿಸಲಾಗಿದೆ. ಆಯ್ಕೆಯಾಗಿರುವ ಶೇ. 60 ಅಭ್ಯರ್ಥಿಗಳು ಬ್ರಾಹ್ಮಣರೇ ಆಗಿದ್ದಾರೆ. ತನ್ನನ್ನು ಎರಡು ಬಾರಿ ಸಂದರ್ಶನ ನಡೆಸಿ, ತನಗೆ ಅವಕಾಶ ವಂಚನೆ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ಮಕ್ವಾನರ ನ್ಯಾಯವಾದಿ ಎ.ಎಂ. ಚೌಹಾಣ್ ದೂರು ಸಲ್ಲಿಸಿದ್ದರು.
ಜಡ್ಜ್ ಅವರ ಉಪನಾಮ(Surname)ದಿಂದ ಅವರು ಕೂಡ ಅದೇ ಸಮುದಾಯಕ್ಕೆ ಸೇರಿದವರು ಎಂದು ತಿಳಿಯುತ್ತದೆ. ಹೀಗಾಗಿ ಪ್ರಕರಣವನ್ನು ಈ ನ್ಯಾಯಾಲಯ ಆಲಿಸಕೂಡದು ಎಂದು ನ್ಯಾಯವಾದಿ ಚೌಹಾಣ್ ಮನವಿ ಮಾಡಿದ್ದರು.
'ತಾನು ಹೈಕೋರ್ಟ್ ನ್ಯಾಯಾಧೀಶನಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ, ನ್ಯಾಯವಾದಿಯೊಬ್ಬರು ಇಂತಹ ವಾದವನ್ನು ಮುಂದಿಟ್ಟಿರುವುದು ಇದೇ ಮೊದಲ ಬಾರಿಯಾಗಿದೆ. ಹೀಗಾಗಿ, ಇದು ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಲು ಸೂಕ್ತವಾದ ಪ್ರಕರಣ' ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಮೂರ್ತಿ ಆರ್.ಆರ್ ತ್ರಿಪಾಠಿ, ದೂರನ್ನು ತಿರಸ್ಕರಿಸಿದ್ದಾರೆ.
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications