ಆಪರೇಷನ್ ಕಮಲಕ್ಕೆ ಎಂಸಿ ಆಶ್ವಥ್ ಬಲಿ
ಬೆಂಗಳೂರು,
ಅ. 16 : ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಚನ್ನಪಟ್ಟಣದ ಜೆಡಿಎಸ್ ಶಾಸಕ ಅಶ್ವತ್ಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿಯ ಕೆಲ ಹಿರಿಯ ಮುಖಂಡರ ಜತೆ ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ನಿವಾಸಕ್ಕೆ ತೆರಳಿ ಗುರುವಾರ ರಾತ್ರಿ ರಾಜೀನಾಮೆ ಸಲ್ಲಿಸಿರುವ ಅಶ್ವತ್ಥ್ , ಜೆಡಿಎಸ್‌ಗೆ ಅಧಿಕೃತವಾಗಿ ಗುಡ್ ಬೈ ಹೇಳಿದ್ದಾರೆ. id="toptextpromo">ಅಶ್ವತ್ಥ್
ಅವರ ಈ ಕ್ರಮ ಜೆಡಿಎಸ್ ವರಿಷ್ಠರ ತೀವ್ರ ಟೀಕೆಗೆ ಕಾರಣವಾಗಿದ್ದು, ಚನ್ನಪಟ್ಟಣದ ಜನತೆ ಈ ಬಗ್ಗೆ ತಕ್ಕಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ವಿಧಾನಸಭೆಯಲ್ಲಿ ಜೆಡಿಎಸ್‌ನ ಸಂಖ್ಯಾ ಬಲ 27ಕ್ಕೆ ಕುಸಿದಿದೆ. ಅಶ್ವತ್ಥ್ ರಾಜೀನಾಮೆ ಸಲ್ಲಿಸುವಾಗ ಕೆಲ ಬಿಜೆಪಿ ಮುಖಂಡರು ಜತೆಯಾಗಿದ್ದುದು, ತೀವ್ರ ಚರ್ಚೆಗೆ ಕಾರಣವಾಗಿದೆ. ಸಂಖ್ಯಾಬಲ ಅಲ್ಪಮತಕ್ಕೆ ಇಳಿದಿರುವ ಹಿನ್ನೆಲೆಯಲ್ಲಿ ಬಿಜೆಪಿ ಈ ಮೂಲಕ ಮತ್ತೆ 'ಆಪರೇಷನ್ ಕಮಲ"ಕ್ಕೆ ಚಾಲನೆ ನೀಡಿದೆ. id='are-slot-1' class='oiad oi-axt oiadv'> id='top-searched-articles'>ಬಿಜೆಪಿಯ
11 ಅತೃಪ್ತರು ಹಾಗೂ ಐವರು ಪಕ್ಷೇತರ ಶಾಸಕರು ಯಡಿಯೂರಪ್ಪನವರ ನಾಯಕತ್ವದ ವಿರುದ್ಧ ಬಂಡೆದ್ದು, ಗೋವಾ ರೆಸಾರ್ಟ್ ಸೇರಿದ ಎರಡು ದಿನಗಳ ನಂತರ ಅಶ್ವತ್ಥ್ ಕ್ಷೇತ್ರದಿಂದ ಮಾಯವಾಗಿದ್ದರು. ಜೆಡಿಎಸ್ ವರಿಷ್ಠರ ಸಂಪರ್ಕಕ್ಕೂ ಸಿಗದ ಅವರು ಬಿಜೆಪಿಯ ಹಿರಿಯ ಮುಖಂಡರ ಜತೆ ಇದ್ದರು. ಸೋಮವಾರ ನಡೆದ ವಿಶ್ವಾಸಮತ ಯಾಚನೆಗೆ ಮುನ್ನ ಜೆಡಿಎಸ್ ಸಚೇತಕರು ಅಶ್ವತ್ಥ್‌ಗೆ ವಿಪ್ ಜಾರಿಗೊಳಿಸಿದ್ದರು. ಖುದ್ದಾಗಿ ಹಾಜರಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮತ ಚಲಾಯಿಸಬೇಕು, ಇಲ್ಲವಾದರೆ ಪಕ್ಷಾಂತರ ನಿಷೇಧ ಕಾಯಿದೆ ಅಡಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿತ್ತು. ಆದರೆ, ಅಶ್ವತ್ಥ್ ಗೈರು ಹಾಜರಾಗಿದ್ದರು.











Click it and Unblock the Notifications