ಕಟ್ಟಾ ಜಗದೀಶ್ ಗೆ ಷರತ್ತುಬದ್ಧ ಜಾಮೀನು
ಬೆಂಗಳೂರು,
ಅ.12: ಬಿಬಿಎಂಪಿ ಕಾರ್ಪೊರೇಟರ್ ಕಟ್ಟಾ ಜಗದೀಶ್ ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಪ್ರತಿ ಭಾನುವಾರ ಲೋಕಾಯುಕ್ತ ಪೊಲೀಸರ ಕಚೇರಿಗೆ ಹಾಜರಾಗಬೇಕು ಹಾಗೂ ಸಹಿ ಹಾಕಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. id="toptextpromo">ಜೊತೆಗೆ
ಕಟ್ಟಾ ಜಗದೀಶ್ ವಿರುದ್ಧ ಲೋಕಾಯುಕ್ತರು ನೀಡಿದ್ದ ಎಫ್ಐಆರ್ ಅನ್ನು ಹೈಕೋರ್ಟ್ ತಡೆ ನೀಡಿದೆ. 50 ಸಾವಿರ ರು ಮೊತ್ತದಭದ್ರತಾ ಠೇವಣಿ ಇರಿಸಬೇಕು.ಪಾಸ್ ಪೋರ್ಟ್ ಅನ್ನು ಪೊಲೀಸರಿಗೆ ಒಪ್ಪಿಸಬೇಕು ಹಾಗೂ ಅನುಮತಿ ಇಲ್ಲದೆ ವಿದೇಶಕ್ಕೆ ತೆರಳುವಂತಿಲ್ಲ ಎಂದು ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಮಗ ಜಗರ್ದೀಶ್ ಗೆ ಹೈಕೋರ್ಟ್ ನಿರ್ಬಂಧ ಹೇರಿದೆ. id='are-slot-1' class='oiad oi-axt oiadv'> id='top-searched-articles'>ಸುಮಾರು
107 ಕೋಟಿ ರು ಕೆಐಎಡಿಬಿ ಭೂಕಬಳಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಾಕ್ಷಿದಾರ ಅಂಜಿನಪ್ಪ ಅವರಿಗೆ 1 ಲಕ್ಷ ರೂ ಲಂಚ ನೀಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಎಡಿಜಿಪಿ ಆರ್ ಕೆ ದತ್ತಾ ನೇತೃತ್ವದ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ರು. ಸೆ.30ರಂದು ಕಟ್ಟಾ ಜಗದೀಶನನ್ನು ಬಂಧಿಸಲಾಗಿತ್ತು. 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.











Click it and Unblock the Notifications