ಅ.14: ಬಹುಮತ ಸಾಬೀತಿಗೆ ಹೊಸ ಡೆಡ್ ಲೈನ್

ಅ.11ರಂದು ಕಾನೂನು ಹಾಗೂ ಸಾಂವಿಧಾನಿಕ ಕ್ರಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದಿರುವ ರಾಜ್ಯಪಾಲರು ಇಂದು ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡುವ ಸಾಧ್ಯತೆಯಿದೆ.
ಈ ಮಧ್ಯೆ ದೆಹಲಿ ತಲುಪಿರುವ ಸಿಎಂ ಯಡಿಯೂರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯಪಾಲರ ಪತ್ರ ತಲುಪಿದೆ. ಅ.14 , 11 ಗಂಟೆಗೆ ಮತ್ತೊಮ್ಮೆ ಬಹುಮತ ಸಾಬೀತು ಮಾಡಲು ಸೂಚಿಸಿದ್ದಾರೆ. ಅ.11 ರಂದು ವಿಶ್ವಾಸಮತ ಗಳಿಸಿದ ಮೇಲೆ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿದ್ದ ರಾಜ್ಯಪಾಲರ ಈ ಕ್ರಮ ಆಶ್ಚರ್ಯವನ್ನು ಉಂಟು ಮಾಡಿದೆ. ಮುಂದಿನ ಕ್ರಮದ ಬಗ್ಗೆ ರಾಷ್ಟ್ರೀಯ ನಾಯಕರೊಡನೆ ಚರ್ಚಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS











Click it and Unblock the Notifications