ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಂಡಾಗಿರಿ:ಪಕ್ಷೇತರ ಶಾಸಕರ ವಿರುದ್ಧ ಕೇಸ್

By Mahesh
|
Google Oneindia Kannada News

Goolihatti and other 5 booked
ಬೆಂಗಳೂರು, ಅ.11: ಅತೃಪ್ತ ಬಿಜೆಪಿ ಶಾಸಕರು ಅತಂತ್ರಗೊಂಡ ಬೆನ್ನಲ್ಲೇ, ಪಕ್ಷೇತರರ ಮೇಲೆ ಕ್ರಮ ಸರ್ಕಾರ ಕ್ರಮ ಕೈಗೊಂಡಿದೆ. ಅನರ್ಹಗೊಂಡ ಶಾಸಕರನ್ನು ಸದನದ ಒಳಗೆ ಬಿಡಲು ಅಡ್ಡಿಪಡಿಸಿದ ಕರ್ತವ್ಯ ನಿರತ ಮಾರ್ಷಲ್ ಗಳ ಮೇಲೆ ಸೋಮವಾರ ವಿಧಾನಸಭೆಯಲ್ಲಿ ನಡೆದ ದಾಳಿಯಲ್ಲಿ 16 ಜನ ಮಾರ್ಷಲ್ ಗಳು ಅಸ್ವಸ್ಥಗೊಂಡಿದ್ದಾರೆ. ಪ್ರವೇಶದ ನಿಷೇಧ ಇದ್ದರೂ ಸದನಕ್ಕೆ ನುಗ್ಗಿ, ದಾಂಧಲೆ ನಡೆಸಿದ ಪಕ್ಷೇತರ ಶಾಸಕರ ಮೇಲೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ ಹೇಳಿದ್ದಾರೆ.

ಪಕ್ಷೇತರರಾದ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ, ಪಾವಗಡ ಶಾಸಕ ವೆಂಕಟರಮಣಪ್ಪ, ಹಿರಿಯೂರು ಶಾಸಕ ಡಿ. ಸುಧಾಕರ್, ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ. ಶೇಖರ್, ಕನಕಗಿರಿ ಶಾಸಕ ಶಿವರಾಜ್ ತಂಗಡಗಿ, ಕೋಲಾರ ಶಾಸಕ ವರ್ತೂರು ಪ್ರಕಾಶ್ ಅವರ ವಿರುದ್ಧ ಕೇಸ್ ದಾಖಲಿಸಲಾಗಿದೆ.

ವಿಧಾನಸೌಧದ ಪಶ್ಚಿಮದ್ವಾರದ ಮೂಲಕ ಪ್ರವೇಶಿಸಿದ ಅತೃಪ್ತರು ಸದನ ಪ್ರವೇಶಿಸುವ ಮುನ್ನ ಅಡ್ಡ ಸಿಕ್ಕ ಮಾರ್ಷಲ್ ಗಳನ್ನು ಚೆನ್ನಾಗಿ ಥಳಿಸಿದ್ದಾರೆ. ಈ ಪೈಕಿ ಒಂದಿಬ್ಬರು ಮಾರ್ಷಲ್ ಗಳು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಸದನದ ಒಳಗೆ ಶಾಸಕರ ಪ್ರವೇಶಕ್ಕಾಗಿ ಪೂರ್ವ ದ್ವಾರವನ್ನು ಸಜ್ಜುಗೊಳಿಸಲಾಗಿತ್ತು. ಆದರೆ, ಪ್ರತಿಪಕ್ಷದ ನಾಯಕರು ಹಾಗೂ ಪಕ್ಷೇತರರು ಉತ್ತರ ದ್ವಾರದ ಮೂಲಕ ನುಗ್ಗಿದರು ಎಂದು ಬಿದರಿ ಹೇಳಿದ್ದಾರೆ.

ಸಿದ್ದು ಬಿದರಿ ಜಟಾಪಟಿ:ಸ್ಪೀಕರ್ ಆದೇಶದಂತೆ ನಿಗದಿತ ದ್ವಾರದಿಂದ ಮಾತ್ರ ಶಾಸಕರನ್ನು ಒಳಬಿಡಲಾಯಿತು. ಆದರಂತೆ ಸಿದ್ದರಾಮಯ್ಯ ಅವರಿಗೆ ಸದನ ಪ್ರವೇಶ ನಿರಾಕರಿಸಲಾಯಿತು ಎಂದು ಬಿದರಿ ಸ್ಪಷ್ಟಪಡಿಸಿದ್ದಾರೆ. ಸದನದ ಒಳಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಸದನದ ಬಾವಿಗೆ ಇಳಿದು ಕೂಡಾ ಗಲಾಟೆ ನಡೆಸಿದರು. ಕೆಲವರು ಸ್ಪೀಕರ್ ಪೀಠವನ್ನು ಹತ್ತಿ ಘೋಷಣೆ ಕೂಗಿದರು.

ಆದರೆ, ಸದನದಲ್ಲಿ ಮಾರ್ಷಲ್ ಗಳಲ್ಲದೆ ಪೊಲೀಸರಿಗೆ ಪ್ರವೇಶ ನಿರ್ಬಂಧಿಸಿದ್ದರೂ, ಸಮವಸ್ತ್ರಧಾರಿಯಾದ ಶಂಕರ್ ಬಿದರಿ ತಮ್ಮ ಪಡೆ ಜೊತೆಗೆ ಸದನದ ಒಳ ಪ್ರವೇಶಿಸಿದ್ದು ಎಷ್ಟು ಸರಿ ಎಂದು ವಿರೋಧ ಪಕ್ಷಗಳ ಅನೇಕ ಸದಸ್ಯರು ಆರೋಪ ಮಾಡಿದ್ದಾರೆ. ಇಂದು ಶಾಸಕರ ಜೊತೆ ಸದಾ ಸುತ್ತುವ ಅವರ ಪಿಎ ಹಾಗೂ ಗನ್ ಮ್ಯಾನ್ ಗಳು ಇಂದು ಸದನದ ಒಳಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X