ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸೌಧಕ್ಕೆ ನುಗ್ಗಿದ 16 ಅತೃಪ್ತ ಶಾಸಕರು

By Mahesh
|
Google Oneindia Kannada News

Rebel MLAs entry Vidhanasoudha
ಬೆಂಗಳೂರು, ಅ.10: ವಿಶ್ವಾಸಮತಯಾಚನೆಗೆ ಕೆಲವೇ ಗಂಟೆಗಳು ಬಾಕಿಯಿರುವಂತೆಯೇ 16 ಮಂದಿ ಅತೃಪ್ತ ಶಾಸಕರ ಸದಸ್ಯತ್ವವನ್ನು ಸ್ಪೀಕರ್ ಅನರ್ಹಗೊಳಿಸಿದ ಬೆನ್ನಲ್ಲೇ, ಬಂಡಾಯವೆದ್ದಿರುವ ಶಾಸಕರು ವಿಧಾನಸೌಧಕ್ಕೆ ಲಗ್ಗೆ ಇಟ್ಟಿದ್ದಾರೆ. ಕಣ್ಣೆದುರಿಗೆ ಕಂಡ ಸುರೇಶ್ ಕುಮಾರ್, ಅಶೋಕ್ ಮುಂತಾದ ನಾಯಕರನ್ನು ವಾಚಾಮಗೋಚಾರ ಬೈಯುತ್ತಾ ಪಶ್ಚಿಮ ದ್ವಾರದ ಮೂಲಕ ಅತೃಪ್ತರು ಪ್ರವೇಶ ಪಡೆದಿದ್ದಾರೆ.

ಜೆಡಿಎಸ್ ನಾಯಕ ಜಮೀರ್ ಅಹಮದ್ ನೇತೃತ್ವದಲ್ಲಿ ಬಿಜೆಪಿಯ 11, ಪಕ್ಷೇತರರು 5 ಶಾಸಕರು ವೋಲ್ವೋ ಬಸ್ ಮೂಲಕ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಆದರೆ, ವಿಧಾನಸೌಧದ ನಾಲ್ಕು ಮುಖ್ಯದ್ವಾರಗಳಲ್ಲಿ ಅತೃಪ್ತಶಾಸಕರಿಗೆ ಪ್ರವೇಶ ನಿಷೇಧಿಸಲಾಗಿದೆ.

ಒಂದು ವೇಳೆ, ವಿಧಾನಸೌಧ ಪ್ರವೇಶಿಸಿದರೂ, ಸದನ ಪ್ರವೇಶಕ್ಕೆ ಮಾರ್ಷಲ್ ಗಳು ತಡೆ ಒಡ್ಡಿದರೂ ಲೆಕ್ಕಿಸದೆ ಸದನ ಪ್ರವೇಶಿಸಿದ್ದಾರೆ. ಸಜ್ಜಾಗಿದ್ದಾರೆ. ಈ ನಡುವೆ ಸಿಎಂ ಯಡಿಯೂರಪ್ಪ, ವಿಎಸ್ ಆಚಾರ್ಯ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ವಿಧಾನಸೌಧ ಪ್ರವೇಶಿಸಿದ್ದಾರೆ.

ಅನರ್ಹಗೊಂಡ ಬಿಜೆಪಿಯ ಅತೃಪ್ತ ಶಾಸಕರು: ಅರಭಾವಿ-ಬಾಲಚಂದ್ರ ಜಾರಕಿಹೊಳಿ, ಕಾಗವಾಡ-ಭರಮ ಗೌಡ ಕಾಗೆ, ಹುನಗುಂದ-ದೊಡ್ಡಣಗೌಡ ಪಾಟೀಲ್, ಬಸವನ ಬಾಗೇವಾಡಿ- ಎಸ್.ಕೆ.ಬೆಳ್ಳುಬ್ಬಿ, ಇಂಡಿ-ಡಾ.ಸಾರ್ವಭೌಮ ಬಗಲಿ, ಸುರಪುರ- ನರಸಿಂಹ ನಾಯಕ್ (ರಾಜೂ ಗೌಡ), ಕಾರವಾರ-ಆನಂದ್ ವಸಂತ ಅಸ್ನೋಟಿಕರ್, ದೇವದುರ್ಗ- ಕೆ.ಶಿವನ ಗೌಡ ನಾಯಕ್, ಸಾಗರ- ಗೋಪಾಲಕೃಷ್ಣ ಬೇಳೂರು, ಕೆಜಿಎಫ್-ವೈ.ಸಂಪಂಗಿ, ನೆಲಮಂಗಲ-ಎಂ.ವಿ.ನಾಗರಾಜು, ಚಾಮರಾಜನಗರ -ಎಚ್.ಎಸ್. ಶಂಕರಲಿಂಗೇಗೌಡ, ಕೊಳ್ಳೇಗಾಲ-ಜಿ. ಎನ್.ನಂಜುಂಡಸ್ವಾಮಿ, ಲಿಂಗಸಗೂರು-ಮಾನಪ್ಪ ವಜ್ಜಲ(ಇನ್ನೂ ನಿರ್ಧಾರ ಪ್ರಕಟಿಸಿಲ್ಲ)

ಪಕ್ಷೇತರರು: ಮಳವಳ್ಳಿ-ನರೇಂದ್ರ ಸ್ವಾಮಿ, ಪಾವಗಡ- ವೆಂಕಟರಮಣಪ್ಪ, ಹಿರಿಯೂರು- ಡಿ. ಸುಧಾಕರ್, ಹೊಸದುರ್ಗ- ಗೂಳಿ ಹಟ್ಟಿ ಡಿ. ಶೇಖರ್, ಕನಕಗಿರಿ- ಶಿವರಾಜ್ ತಂಗಡಗಿ, ಕೋಲಾರ- ವರ್ತೂರು ಪ್ರಕಾಶ್

ಸಂಖ್ಯಾಬಲ :ಅ.6ರಂದು ಬಿಜೆಪಿ ಶಾಸಕರ ಸಂಖ್ಯಾಬಲ 117 ಇತ್ತು. ಅವರಲ್ಲಿ 14 ಮಂದಿ ಶಾಸಕರು ಬಂಡಾಯದ ಬಾವುಟ ಹಿಡಿದು ಹೊರ ಹೋಗಿದ್ದು, ಬಿಜೆಪಿಯ ಪ್ರಸ್ತುತ ಸ್ಪೀಕರ್ ಸೇರಿ ಸಂಖ್ಯಾಬಲ 103ಕ್ಕೆ ಕುಸಿದಿದೆ. ಬಹುಮತ ಸಾಬೀತಿಗೆ 10 ಮಂದಿ ಶಾಸಕರ ಕೊರತೆ ಇದೆ.

ಪ್ರತಿಪಕ್ಷ ಕಾಂಗ್ರೆಸ್-73, ಜೆಡಿಎಸ್-28, ಪಕ್ಷೇತರರು-6 ಮತ್ತು ಭಿನ್ನಮತೀಯ ಬಿಜೆಪಿ ಶಾಸಕರು 14 ಮಂದಿ ಒಗ್ಗೂಡಿದರೆ ಸಂಖ್ಯಾಬಲ 121ಕ್ಕೇರಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರಕಾರಕ್ಕೆ ಬಹುಮತ ದೊರೆಯುವುದು ಕಷ್ಟಸಾಧ್ಯ.

ಆದರೆ, ಶಾಸಕರ ಅನರ್ಹಗೊಂಡ ಹಿನ್ನೆಲೆಯಲ್ಲಿ ಒಟ್ಟು ಸಂಖ್ಯಾ ಬಲ 208ಕ್ಕಿಳಿದಿದೆ. ಇದರಿಂದ ಯಡಿಯೂರುಪ್ಪ ನೇತೃತ್ವದ ಬಿಜೆಪಿ ಸರಕಾರ ಇಂದು ನಡೆಯುವ ವಿಶ್ವಾಸಮತ ಯಾಚನೆಯಲ್ಲಿ ವಿಜಯಿಯಾಗುವ ನಿರೀಕ್ಷೆಯಲ್ಲಿದೆ. ಆದರೆ, ವಿಶ್ವಾಸಮತ ಯಾಚನೆಗೆ ಅಡ್ಡಿಪಡಿಸಲು ಎಲ್ಲ ರೀತಿಯಲ್ಲಿ ವಿಪಕ್ಷಗಳು ಸಜ್ಜಾಗಿವೆ.


ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X