ಬಲಾಬಲದ ಲೆಕ್ಕಾಚಾರದಲ್ಲಿ ಬಿಜೆಪಿಗೆ ಸೋಲು?

ಜೆಡಿಎಸ್ ನಿಂದ ಒಬ್ಬ ಶಾಸಕರು ಬಿಜೆಪಿ ಬಣಕ್ಕೆ ಹಾರಿದ್ದಾರೆ ಎಂಬ ಮಾಹಿತಿ ಇರುವುದರಿಂದ ಜೆಡಿಎಸ್ ಸಂಖ್ಯಾಬಲ 27ಕ್ಕೆ ಇಳಿದಿದೆ. ಕಾಂಗ್ರೆಸ್ ನ 73 ಜನ ಸೇರಿ 100 ಜನ ಶಾಸಕರು ಪ್ಲಸ್ 20 ರ ಆಸುಪಾಸಿನಲ್ಲಿರುವ ಅತೃಪ್ತ ಶಾಸಕರು ಸೇರಿ ಬಿಜೆಪಿಗೆ ಸಮಾಧಿ ಕಟ್ಟುವ ಸಾಧ್ಯತೆ ದಟ್ಟವಾಗಿ ಕಂಡು ಬಂದಿದೆ.
ಕಾನೂನು ಕ್ರಮದ ಪರಿಣಾಮ ಏನಾಗಬಹುದು?: ಶಾಸಕರಿಗೆ ನೋಟಿಸ್ ನೀಡಲಾಗಿದೆ. ಇದರಲ್ಲಿ ಪಕ್ಷೇತರರು ಇರುವುದು ವಿಶೇಷ. ಒಂದು ವೇಳೆ ನಾಳೆ ಸದನಕ್ಕೆ ಹಾಜರಾಗದೇ ಬಂಡಾಯವೆದ್ದರೆ, ಇವರ ಸದಸ್ಯತ್ವ ಅನರ್ಹಗೊಳ್ಳುತ್ತದೆ. ಸರ್ಕಾರ ಪತನವಾಗುತ್ತದೆ.
ಇನ್ನೊಂದೆಡೆ ಸ್ಪೀಕರ್ ಚುನಾವಣೆ ವೇಳೆಯಲ್ಲಿ ನಡೆದ ಗಲಭೆಗೆ ಕಾರಣರಾದ ಜೆಡಿಎಸ್, ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸುವ ಆದೇಶದ ಪ್ರತಿ ಕೂಡಾ ಸಿದ್ಧ ಎನ್ನಲಾಗಿದೆ. ಲಂಚ ಪ್ರಕರಣದ ಆರೋಪಿ ವೈ ಸಂಪಂಗಿ ವಿರುದ್ಧ ಕೂಡಾ ಕಾನೂನು ಅಸ್ತ್ರ ಬಳಕೆಯಾಗಬಹುದು.
ಆದರೆ, ಬಂಡಾಯ ನಾಯಕರನ್ನು ತಮ್ಮ ಬಳಿ ಉಳಿಸಿಕೊಂಡಿರುವ ಜೆಡಿಎಸ್ ಪಕ್ಷ, ಸ್ಪೀಕರ್ ನೀಡಿರುವ ನೋಟಿಸ್ ವಿರುದ್ಧ ರಿಟ್ ಅರ್ಜಿ ತಯಾರಿಸಿಕೊಂಡು ಕಾದುಕುಳಿತ್ತಿದ್ದಾರೆ. ಸ್ಪೀಕರ್ ಇಂದು ಸಂಜೆ ನೀಡುವ ರೂಲಿಂಗ್ ಮೇಲೆ ಜೆಡಿಎಸ್ ನ ನಡೆ ನಿರ್ಧಾರವಾಗಲಿದೆ.
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications