ವಿಧಾನಸೌಧದಲ್ಲಿ ವಾಮಾಚಾರ ಜೆಡಿಎಸ್ ತಂತ್ರ; ಬಿಎಸ್‌ವೈ

ರಾಜ್ಯ ರಾಜಕೀಯ ಕ್ಷಣ ಕ್ಷಣಕ್ಕೂ ತಿರುವು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಯಡಿಯೂರಪ್ಪ ಅವರು ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಭಗವಂತನಿಗೆ ಮೊರೆ ಹೋದರು. ನಗರದ ಲಕ್ಷ್ಮಿ ನರಸಿಂಹ ದೇವಸ್ಥಾನ, ದೊಡ್ಡಗಣಪತಿ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ನಿರೀಕ್ಷೆಗೂ ಮೀರಿ ನಮಗೆ ಬಹುಮತ ಸಿಗುತ್ತದೆ. ಅತೃಪ್ತರು ಪಕ್ಷಕ್ಕೆ ಮರಳುತ್ತಾರೆ. ನಾವು ಗೋವಾಗೆ ತೆರಳುವ ಅವಶ್ಯಕತೆ ಇಲ್ಲ ಎಂದು ಅವರು ಪುನರುಚ್ಚರಿಸಿದರು. ಏತನ್ಮಧ್ಯೆ ಜೆಡಿಎಸ್ ತೊರೆದ ಶಾಸಕ ಅಶ್ವತ್ಥ್ ವಿರುದ್ಧ ಸಂಸದ ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು. ಅವರೊಬ್ಬ ನೀಚ ರಾಜಕಾರಣಿ, ನಂಬಿಕೆ ದ್ರೋಹಿ. ಜೆಡಿಎಸ್ ಕಾರ್ಯಕರ್ತರ ಕೈಗೆ ಅಶ್ವತ್ಥ್ ಸಿಕ್ಕಿದರೆ ಕಾಲು ಮುರಿಯುತ್ತಾರೆ ಎಂದು ಕಿಡಿಕಾರಿದರು.
ಗೋವಾದಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರು ನಾಯಕತ್ವ ಬದಲಾಗಲೇಬೇಕು ಎಂದು ಪಟ್ಟು ಹಿಡಿದಿದ್ದು, ಅತೃಪ್ತರನ್ನು ಮರಳಿ ಪಕ್ಷಕ್ಕೆ ಕರೆತರುವ ಪ್ರಯತ್ನಗಳನ್ನು ಪ್ರವಾಸೋದ್ಯಮ ಸಚಿವ ಜಿ ಜನಾರ್ದನ ರೆಡ್ಡಿ ಮುಂದುವರಿಸಿದ್ದಾರೆ.ಜೆಡಿಎಸ್ ಶಾಸಕರಿಗೆ ಬಿಜೆಪಿ ಗಾಳ ಹಾಕಿದೆ ಎಂಬ ಮಾತುಗಳು ಕೇಳಿಬಂದಿವೆ.












Click it and Unblock the Notifications