ರಾಹುಲ್ ಗಾಂಧಿಗೆ ಯಾಕೋ ಬುದ್ದಿ ನೆಟ್ಟಗಿಲ್ಲ

ಮಾನಸಿಕವಾಗಿ ಸರಿಯಿದ್ದವರು ಯಾರೂ ಸಿಮಿಯನ್ನು ಆರ್ಎಸ್ಎಸ್ ಸಂಘಟನೆ ಜೊತೆ ಹೋಲಿಸುವುದಿಲ್ಲ. ಆರ್ಎಸ್ಎಸ್ ಒಂದು ರಾಷ್ಟ್ರೀಯತಾವಾದವನ್ನು ಆಧಾರವಿಟ್ಟುಕೊಂಡಿರುವ ಸಂಘಟನೆ. ಮಧ್ಯಪ್ರದೇಶದಲ್ಲಿ ತನಗೆ ಗೆಲ್ಲಲು ಸಾಧ್ಯವಿಲ್ಲ ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ತಿಳಿದಿದೆ. ರಾಹುಲ್ ಗಾಂಧಿ ಅವರ ಮ್ಯಾಜಿಕ್ ಇಲ್ಲಿ ಕೆಲಸ ಮಾಡುವುದಿಲ್ಲ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ರಾಹುಲ್ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಸಿಮಿ ಮತ್ತು ಆರ್ಎಸ್ಎಸ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಅವೆರಡೂ ಮತಾಂಧ ಮತ್ತು ಮೂಲಭೂತವಾದಿ ದೃಷ್ಟಿಕೋನಗಳನ್ನು ಹೊಂದಿರುವ ಸಂಘಟನೆಗಳು. ದೇಶದಲ್ಲಿ ನಡೆದ ಹಲವು ಸ್ಪೋಟಗಳ ಹಿಂದೆ ಸಿಮಿ ಕೈವಾಡವಿರುವುದು ಸ್ಪಷ್ಟ. ನಾಗಪುರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಆರ್ಎಸ್ಎಸ್ ಕೂಡ ಯಾವುದೇ ಇತಿಹಾಸವನ್ನು ಹೊಂದಿಲ್ಲ ಎಂದು ಭೋಪಾಲದಲ್ಲಿ ರಾಹುಲ್ ಮಂಗಳವಾರದಂದು (ಅ. 6) ಹೇಳಿಕೆ ನೀಡಿದ್ದರು.
ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS












Click it and Unblock the Notifications