ರೇಣುಕಾ ವಿರುದ್ಧ ತಿರುಗಿನಿಂತ ಕಾರ್ಯಕರ್ತರು
ಬೆಂಗಳೂರು,
ಅ. 7 : ಬಿಜೆಪಿಯಲ್ಲಿ ಭಿನ್ನಮತದ ಕಿಡಿ ಹಚ್ಚಿರುವ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಅವರ ವಿರುದ್ಧವೇ ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ. id="toptextpromo">ಯಡಿಯೂರಪ್ಪ
ಸರಕಾರವನ್ನು ಪತನದ ಅಂಚಿಗೆ ತಂದಿಟ್ಟಿರುವ ರೇಣುಕಾಚಾರ್ಯ ಅವರ ಮನೆಯ ಮುಂದೆ ಬಿಜೆಪಿ ಕಾರ್ಯಕರ್ತರು, ತಾಲೂಕ್ ಪಂಚಾಯತಿ ಅಧ್ಯಕ್ಷ, ಆರ್ಎಸ್ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಭಿನ್ನಮತದ ರಾಗವನ್ನು ಬದಲಿಸಿ ಇಕ್ಕಟ್ಟಿನಲ್ಲಿ ಸಿಲುಕಿರುವ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹದಿನೆಂಟು
ಶಾಸಕರನ್ನು ಚೆನ್ನೈನ ರೆಸಾರ್ಟಿಗೆ ಕರೆದುಕೊಂಡು ಹೋಗಿದ್ದ ರೇಣುಕಾಚಾರ್ಯ ಬಿಜೆಪಿ ಸರಕಾರಕ್ಕೆ ಬೆಂಬಲ ವಾಪಸ್ ಪಡೆದುದಾಗಿ ಹೇಳಿ ಫ್ಯಾಕ್ಸ್ ಕಳುಹಿಸಿದ್ದರು. ಅವರ ಮನವೊಲಿಸಲು ಜನಾರ್ದನ ರೆಡ್ಡಿ ಚೆನ್ನೈಗೆ ತೆರಳಿದ್ದರು. ಅವರಲ್ಲಿ ಕೆಲವರು ಹಿಂತಿರುಗಿ ಬಂದಿದ್ದಾರಾದರೂ ಸಂಧಾನ ವಿಫಲಗೊಂಡಿತ್ತು. ಭಿನ್ನರಾಗ ಹಾಡುತ್ತಿರುವವರನ್ನು ಸೆಳೆಯಲು ನಿರಂತರ ಪ್ರಯತ್ನ ನಡೆದೇಯಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡಕರಿ ಕೂಡ ಭಿನ್ನಮತೀಯ ಶಾಸಕರೊಂದಿಗೆ ಮಾತುಕತೆ ನಡೆಸಿದ್ದಾರೆ.











Click it and Unblock the Notifications