ರೆಸಾರ್ಟ್ ಹೊಕ್ಕ ಶಾಸಕರು, ದೇಗುಲ ಹೊಕ್ಕ ಸಿಎಂ ?

CM BS Yeddyurappa
ಬೆಂಗಳೂರು/ಮಂಗಳೂರು, ಅ.7: ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ಎದ್ದಿರುವ ಬಿರುಗಾಳಿಯಿಂದ ರಕ್ಷಣೆ ಪಡೆಯಲು ಮಾನ್ಯ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರು ಈಗ ದೇವರುಗಳ ಮೊರೆ ಹೊಕ್ಕಿದ್ದಾರೆ. ಇತ್ತ ಶಾಸಕರ ಒಂದು ತಂಡ ಬೆಂಗಳೂರಿನ ಹೊರವಲಯದಲ್ಲಿರುವ ಗೋಲ್ಡನ್ ಪಾಮ್ ರೆಸಾರ್ಟ್ ಗೆ ಪಯಣ ಬೆಳೆಸಿದೆ. ಈ ನಡುವೆ ಬಾಲಚಂದ್ರ ಜಾರಕಿಹೊಳಿ, ಆನಂದ್ ಆಸ್ನೋಟಿಕರ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ. ನವರಾತ್ರಿ ನಂತರ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಆಪ್ತರ ಸಂಗಡ ಅ.7ರಂದು ಕೇರಳದ ಕಣ್ಣೂರು ಜಿಲ್ಲೆಯ ತಳಿಪೆರಂಬು ಶ್ರೀ ರಾಜರಾಜೇಶ್ವರಿ ದೇವಸ್ಥಾನ ಹಾಗೂ ಮಡನ್‌ಕಾವು ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಆದರೆ, ಮುಖ್ಯಮಂತ್ರಿಗಳ ಅಧಿಕೃತ ಪಿಎ ಪ್ರಕಟಣೆ ಪ್ರಕಾರ ಮೈಸೂರಿನ ಚಾಮುಂಡಿ ದೇವಿಯ ಆಶೀರ್ವಾದ ಪಡೆದು, ಯುಪಿಎ ಸರ್ಕಾರದ ಕನಸಿನ ಯೋಜನೆಗೆ ಆಧಾರ್ ಗೆ ಚಾಲನೆ ನೀಡಬೇಕಿದೆ.

ಆದರೆ, ಮಡದ್‌ಕಾವು ಭಗವತಿ ದೇವಸ್ಥಾನಕ್ಕೆ ಈ ಹಿಂದೆ ಹರಕೆ ರೂಪದಲ್ಲಿ ಆನೆಯೊಂದನ್ನು ಅರ್ಪಿಸಿದ್ದ, ಯಡಿಯೂರಪ್ಪ ಅವರು ಶತ್ರುಗಳ ಸಮಸ್ಯೆ ಪರಿಹಾರಕ್ಕಾಗಿ ಕಂಡ ಕಂಡ ದೇವರುಗಳಿಗೆ ಕೈ ಮುಗಿಯಲು ಮುಗಿಬೀಳುತ್ತಿದ್ದಾರೆ ಎನ್ನಲಾಗಿದೆ.

ಗುರುವಾರ ಬೆಳಗ್ಗೆ 8.35ಕ್ಕೆ ವಿಶೇಷ ವಿಮಾನದ ಮೂಲಕ ಮುಖ್ಯಮಂತ್ರಿಗಳು ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ 9ಕ್ಕೆ ಹೆಲಿಕಾಪ್ಟರ್‌ ಮೂಲಕ ಕಣ್ಣೂರಿಗೆ ತೆರಳುವರು.ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ಅಪರಾಹ್ನ 2 ಗಂಟೆಗೆ ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ 2.10ಕ್ಕೆ ಬೆಂಗಳೂರಿಗೆ ತೆರಳುವರು ಎಂದು ಒಂದು ಮೂಲದ ವರದಿ. ಇನ್ನೊಂದೆಡೆ ಇದೇ ಸಮಯಕ್ಕೆ ಮೈಸೂರಿನ ಹೊಸ ವಿಮಾನ ನಿಲ್ದಾಣದಲ್ಲಿ ಇಳಿವ ಸಿಎಂ, ಆಧಾರ್ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದೆ.

ಈ ಎರಡೂ ಕಾರ್ಯಕ್ರಮಗಳು ಯೋಜನೆಯಂತೆ ನಡೆಯುವುದು ಅನುಮಾನವಾಗಿದ್ದು, ನಗರಕ್ಕೆ ಇಂದು ಆಗಮಿಸುವ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ಮುಂದಿನ ನಡೆಯ ಬಗ್ಗೆ ಸಮಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+