ಚೆನ್ನೈನಲ್ಲಿ ರಾಜ್ಯ ರಾಜಕೀಯ ಹಣೆಬರಹ ಬರೆದ ರೇಣುಕಾ

ಚೆನ್ನೈನಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ರೆಣುಕಾಚಾರ್ಯ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಆದರೆ ನಮ್ಮ ಕೆಲ ಬೇಡಿಕೆಗಳಿಗೆ ಕಿಂಚಿತ್ ಮನ್ನಣೆ ಸಿಗದ ಕಾರಣ ಅನಿವಾರ್ಯವಾಗಿ ಬೆಂಬಲ ವಾಪಸ್ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಭ್ರಷ್ಟಾಚಾರ, ಡಿನೋಟಿಫಿಕೇಷನ್ ಹಗರಣಗಳಿಂದ ಜರ್ಜರಿತವಾಗಿರುವ ಯಡಿಯೂರಪ್ಪ ಸರಕಾರಕ್ಕೆ ರೇಣುಕಾಚಾರ್ಯ ಅಂತಿಮ ಮೊಳೆ ಹೊಡೆದಿದ್ದಾರೆ.
ಬೇಡಿಕೆಗಳು : ಕ್ಷೇತ್ರದ ಅಭಿವೃದ್ಧಿಗಾಗಿ 10 ಕೋಟಿ ರು. ಕೊಡುತ್ತೇವೆಂದು ಹೇಳಿದ್ದರು. ಮುಖ್ಯಮಂತ್ರಿ ಕೊಡುವ ಮನಸ್ಸೇ ಮಾಡಲಿಲ್ಲ. ಜನ ಅಭಿವೃದ್ಧಿ ನಡೆದೇಯಿಲ್ಲ ಎಂದು ಹೇಳುತ್ತಿದ್ದಾರೆ. ಸಚಿವ ಗೂಳಿಹಟ್ಟಿ ಶೇಖರ್ ಅವರನ್ನು ಸಂಪುಟದಿಂದ ಬಿಡಬಾರದೆಂದು ಬೇಡಿಕೆ ಇಟ್ಟಿದ್ದೆವು, ಯಡಿಯೂರಪ್ಪನವರು ಸೊಪ್ಪು ಹಾಕಲಿಲ್ಲ. ಈಡಿಗ ಸಮಾಜದ ಬೇಳೂರು ಗೋಪಾಲಕೃಷ್ಣ ಅವರಿಗೆ ಸಂಪುಟದಲ್ಲಿ ಸೇರಿಸಿಕೊಳ್ಳುವ ನಮ್ಮ ಬೇಡಿಕೆಗೆ ಕಿವಿಗೊಡಲಿಲ್ಲ ಎಂದು ರೇಣುಕಾಚಾರ್ಯ ಅಲವತ್ತುಕೊಂಡರು.
ಸಚಿವ ಸ್ಥಾನ ಹೋದರೂ ಅಡ್ಡಿಯಿಲ್ಲ ಯಡಿಯೂರಪ್ಪ ಸರಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯುವುದಿಲ್ಲ. ಭಿನ್ನಮತೀಯರಿಗೆ ಲಂಚ ಕೊಡಲಾಗಿದೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. ಅದೆಲ್ಲ ಸುಳ್ಳು. ನಮಗೆ ಯಾರೂ ಲಂಚದ ಆಮಿಷ ಒಡ್ಡಿಲ್ಲ ಎಂದು ಅವರು ಹೇಳಿದರು.
ಚೆನ್ನೈಗೆ ರೆಡ್ಡಿ ದೌಡು : ಭಿನ್ನಮತೀಯರ ಬೆಂಬಲ ವಾಪಸಾತಿಯಿಂದ ಯಡಿಯೂರಪ್ಪ ಸರಕಾರದ ಮೇಲೆ ತೂಗುಕತ್ತಿ ತೂರಾಡುತ್ತಿದ್ದು, ಸರಕಾರ ರಚಿಸಲು ಕಾರಣರಾಗಿದ್ದ ಜನಾರ್ಧನ ರೆಡ್ಡಿ ಭಿನ್ನಮತೀಯರ ಮನವೊಲಿಸಲು ಚೆನ್ನೈಗೆ ದೌಡಾಯಿಸಿಲು ಸಿದ್ಧತೆ ನಡೆಸಿದ್ದಾರೆ. ಆದರೆ, ಈಗ ಬಂದ ವರದಿ ಪ್ರಕಾರ, ಪತ್ರಿಕಾಗೋಷ್ಠಿ ಮುಗಿದ ಬಳಿಕ ರೇಣುಕಾಚಾರ್ಯ ದಂಡು ಚೆನ್ನೈ ಬಿಟ್ಟು ದುಬೈ ಅಥವಾ ಹಾಂಗ್ ಕಾಂಗ್ ಗೆ ತೆರಳಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಬಹುಮತ ಸಾಬೀತಿಗೆ 12ರ ಗಡುವು : ಪ್ರಸ್ತುತ ರಾಜಕೀಯ ಬೆಳವಣಿಗೆಯನ್ನು ಗಮನಿಸಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಅಕ್ಟೋಬರ್ 12ರಂದು 5 ಗಂಟೆಯೊಳಗೆ ಬಹುಮತ ಸಾಬೀತುಪಡಿಸಬೇಕೆಂದು ಯಡಿಯೂರಪ್ಪನವರಿಗೆ ಸೂಚನೆ ನೀಡಿದ್ದಾರೆ.
ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS











Click it and Unblock the Notifications