ಲಂಡನ್ ನಿಂದ ಟಿಪ್ಪು ಐತಿಹಾಸಿಕ ದಾಖಲೆ ಸಂಗ್ರಹಿಸುವೆ

ಕಿತ್ತೂರು ಚೆನ್ನಮ್ಮ, ಟಿಪ್ಪು ಸುಲ್ತಾನ್ ಸೇರಿದಂತೆ ರಾಜ್ಯದಲ್ಲಿ ಆಗಿ ಹೋಗಿರುವ ಎಲ್ಲ ಸ್ವಾತಂತ್ರ ಹೋರಾಟಗಾರರಿಗೆ ಸೇರಿದ ಅಪರೂಪದ ಐತಿಹಾಸಿಕ ದಾಖಲೆಗಳನ್ನು ಸಂಗ್ರಹಣೆ ಮತ್ತು ಸಂರಕ್ಷಣೆಗೆ ಸರಕಾರ ಬದ್ಧವಾಗಿದೆ. ಜೊತೆಗೆ ರಾಜ್ಯದ ಮಠ, ದೇವಸ್ಥಾನ ಸಮಿತಿಗಳ ಹಾಗೂ ಖಾಸಗಿ ವ್ಯಕ್ತಿಗಳ ಒಡೆತನದಲ್ಲಿರುವ ದಾಖಲೆಗಳನ್ನು ಸಂಗ್ರಹಿಸಿ ಸಂರಕ್ಷಿಸಲಾಗುವುದು ಎಂದು ಅವರು ತಿಳಿಸಿದರು.
ಐತಿಹಾಸಿಕ ದಾಖಲೆಗಳು ಚರಿತ್ರೆಕಾರರಿಗೆ ಮತ್ತು ಸಂಶೋಧ ಕರಿಗೆ ಬಹಳಷ್ಟು ನೆರವಾಗುತ್ತವೆ. ಹಿಂದಿನ ದಾಖಲೆಗಳ ಅಧ್ಯಯನವು ಭವಿಷ್ಯದ ನಾಡ ನಿರ್ಮಾಣಕ್ಕೆ ಮಾರ್ಗದರ್ಶಿಯಾಗುತ್ತದೆ. ಐದನೆಯ ಶತಮಾನದಿಂದ ಹಿಡಿದು ಇಲ್ಲಿಯವರೆಗಿನ ಹಳೆಗನ್ನಡ ಹಾಗೂ ಬರಹದಲ್ಲಿರುವ ಗ್ರಂಥಗಳನ್ನು ಅನುವಾದಿಸಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಐತಿಹಾಸಿಕ ದಾಖಲೆಗಳ ಪ್ರದರ್ಶನವನ್ನು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಹಮ್ಮಿಕೊಳ್ಳಲಾಗುವುದು ಎಂದು ಅವರು ಘೋಷಿಸಿದರು. ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತೆ ಇಲಾಖೆ ರಾಜ್ಯ ಕಾರ್ಯದರ್ಶಿ ಬಿ.ಆರ್. ಜಯಚಾಮರಾಜೇ ಅರಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಾಗಾರ ಇಲಾಖೆಯ ನಿರ್ದೇಶಕ ಕಂಚಿವರದಯ್ಯ ಉಪಸ್ಥಿತರಿದ್ದರು.












Click it and Unblock the Notifications