ಲಂಚ ತಿನ್ನಿಸುತ್ತಿದ್ದಾಗ ಕಟ್ಟಾ ಪುತ್ರನ ಸೆರೆ

ಪ್ರಮುಖ ಸಾಕ್ಷಿರಾಮಾಂಜಿನಪ್ಪ ಅವರಿಗೆ 1 ಲಕ್ಷ ರೂ ಲಂಚ ನೀಡುತ್ತಿದ್ದರು ಎಂದು ಲೋಕಾಯುಕ್ತ ಎಡಿಜಿಪಿ ಆರ್ ಕೆ ದತ್ತಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಜಗದೀಶ್ ಬಂಧನದ ಹಿನ್ನೆಲೆಯಲ್ಲಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಸಿಎಂ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ.
ಕೆಐಎಡಿಬಿಎ ಭೂ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರಿಗೆ ಅಧಿಕೃತ ದಾಖಲೆ ಲಭ್ಯವಾಗಿದೆ. ಈ ಹಗರಣದಲ್ಲಿ 107 ಕೋಟಿ ರೂ.ಗೂ ಅಧಿಕ ಹಣ ಅಕ್ರಮವಾಗಿದ್ದು, ಈ ಸಂಬಂಧ ಸಚಿವ ಕಟ್ಟಾ ಹಾಗೂ ಅವರ ಪುತ್ರನ ವಿರುದ್ಧ ಲೋಕಾ ಯುಕ್ತರು ನೋಟಿಸ್ ಜಾರಿ ಮಾಡಲಾಗಿತ್ತು ಎನ್ನಲಾಗಿದೆ.
ಈ ಸಂಬಂಧ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರನ್ನು ರಹಸ್ಯವಾಗಿ ಭೇಟಿ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಸಚಿವರೊಡನೆ ಭೇಟಿ ಆಗಿಲ್ಲ ಎಂದು ಲೋಕಾಯುಕ್ತರು ಸ್ಪಷ್ಟಪಡಿಸಿದ್ದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರ್ಥಿಕ ವಲಯಕ್ಕಾಗಿ ಜಮೀನು ನೀಡಿದವರಿಗೆ ಕೆಐಎಡಿಬಿಯಿಂದ ನೀಡಲಾಗುವ ಪರಿಹಾರದ ಹಣ ಕಟ್ಟಾ ಅವರ ಪುತ್ರನ ಹೆಸರಿಗೆ ವರ್ಗಾವಣೆಯಾಗಿದೆ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ ಜಿಸಿ ಅನಿಲ್ ಕುಮಾರ್, ರಾಮಕೃಷ್ಣ ಹಾಗೂ ಚಿಕ್ಕಬೆಟ್ಟಯ್ಯ ಎಂಬ ಮೂವರು ಕೆಎಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS












Click it and Unblock the Notifications