ತೀರ್ಪು, ಅನವಶ್ಯಕ ಜಗಳಗಳು ಯಾರಿಗೆ ಬೇಕು?

Wish world lives like this
ಎಲ್ಲಾ ಕಡೆ ಟಪ್ ಟಪ್ ಬೂಟ್ಸ್ ಶಬ್ದ! ಕೈಯಲ್ಲಿ ಮೆಷಿನ್ ಗನ್ಸ್! ಎಲ್ಲ ಕಡೆ ಎಲ್ಲರಲ್ಲೂ ಆತಂಕ, ಭಯದ ವಾತಾವರಣ! ಬೂದಿ ಮುಚ್ಚಿದ ಕೆಂಡದಂತಿರುವ ಸನ್ನಿವೇಶ! ಸಂದಿನಿಂದ ಕುತೂಹಲದಿಂದ ಇಣುಕಿ ನೋಡುತ್ತಿರುವ ಮಕ್ಕಳು... ಯಾವುದೊ ಹಾಲಿವುಡ್ ಅಥವಾ ಬಾಲಿವುಡ್ ಸಿನಿಮಾ ಶೂಟಿಂಗ್ ಅಂತ ಅನ್ನಿಸುತ್ತಿದೆಯಾ? ಇಲ್ಲ... ಇದು ಈ ದಿನ ನಾವು ನೋಡುತ್ತಿರುವ ಪ್ರತ್ಯಕ್ಷ ಘಟನೆ...

ಎಲ್ಲರ ಕಣ್ಣು, ಕಿವಿ ಅಲಹಾಬಾದ್ ಹೈಕೋರ್ಟ್ ಕಡೆಗೆ... ಇನ್ನೇನು ಕೋರ್ಟ್ ಸೆ.30ರಂದು ತೀರ್ಪನ್ನು ನೀಡಲಿದೆ... ತೀರ್ಪು ಯಾವ ಪಾರ್ಟಿ ಕಡೆ ಹೋಗುತ್ತೋ ತಿಳಿಯದು... ಟೀವಿ, ಪ್ರೆಸ್ ರಿಪೋರ್ಟ್ರಗಳು ತುದಿಗಾಲಲ್ಲಿ ಸುದ್ದಿ ಪ್ರಸಾರ ಮಾಡಲು ನಾಮುಂದೆ ತಾವುಮುಂದೆ ಎಂದು ರೆಡಿ ಆಗಿ ಕಾಯುತ್ತಿರುತ್ತಾರೆ. ಇದು ಯಾರು ಬೇಕಾದರೂ ಊಹಿಸಬಹುದಾದ ರಾಮ ಮಂದಿರ - ಬಾಬ್ರಿ ಮಸೀದಿಯ ವಿವಾದದ ಕೇಂದ್ರವಾದ ಅಯೋದ್ಯೆಯಲ್ಲಿನ ಒಂದು ಚಿತ್ರ!

ಅವಕಾಶವಾದಿಗಳು-ಕೋಮುವಾದಿಗಳು ಈ ಸಮಯವನ್ನು ಚೆನ್ನಾಗಿ ಉಪಯೋಗ ಮಾಡಿಕೊಳ್ಳಲು ಸಜ್ಜಾಗಿ ನಿಂತಿರುವುದು ನಿಜಕ್ಕೂ ಆತಂಕ ಪಡಬೇಕಾದ ವಿಷಯ. ಈ ಸಂದರ್ಭದಲ್ಲಿ ನಮ್ಮ ದೇಶದ ಎಲ್ಲ ಧರ್ಮದ ಜನರು, ಬುದ್ದಿವಂತರು, ಬಿಸಿರಕ್ತದ ಯುವ ಜನಾಂಗ ಕುಳಿತು ದೇಶದ ಒಳಿತಿನ ಬಗ್ಗೆ ವಿಶಾಲವಾಗಿ ಯೋಚನೆ ಮಾಡಿ ಅವಕಾಶವಾದಿ-ಕೋಮುವಾದಿಗಳಿಗೆ ಯಾವುದೇ ಆಸ್ಪದ ಕೊಡದಂತೆ ನಡೆದುಕೊಳ್ಳುತ್ತಾರೆ ಅಂತ ದೂರದ ಪರದೇಶಗಳಲ್ಲಿರುವ ಈ ಸಾವಿರಾರು ಭಾರತೀಯರ ನಂಬಿಕೆ.

ಇಲ್ಲಿ ಪ್ರಕಟಿಸಿರುವ ಚಿತ್ರವನ್ನು ನಮ್ಮೆಲ್ಲರ ಮೆಚ್ಚಿನ ಚಿತ್ರದುರ್ಗದ ಶ್ರೀಗಳ ಬೃಹನ್ ಮಠದಲ್ಲಿ ಕ್ಲಿಕ್ ಮಾಡಿದ್ದು ಈ ಸಮಯದಲ್ಲಿ ಅನ್ವಯವಾಗುವಂತಿದೆ. ಸಾಮಾನ್ಯ ಜನರಿಗೆ, ಕಷ್ಟಪಟ್ಟು ದಿನದ ದುಡಿಮೆಯಿಂದ ಜೀವನ ಸಾಗಿಸುವ ಕೂಲಿಕಾರರಿಗೆ, ರೈತಾಪಿ ವರ್ಗದವರಿಗೆ.. ಈ ಯಾವುದೇ ಅನವಶ್ಯಕ ಜಗಳಗಳು ಬೇಡವಾಗಿದೆ!

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+