ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಕಿ ಅತ್ಯಾಚಾರ ಪ್ರಕರಣ: ಕೋಲಿಗೆ ಗಲ್ಲು

By Mahesh
|
Google Oneindia Kannada News

Nithari Killing: CBI court convicts Koli as guilty
ಗಾಜಿಯಾಬಾದ್, ಸೆ.28: ದಿಲ್ಲಿಯನ್ನು ಬೆಚ್ಚಿಬೀಳಿಸಿದ್ದ ಬಾಲಕಿ ರಚನಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಯ್ಡಾ ಸರಣಿ ಅತ್ಯಾಚಾರ, ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುರೀಂದರ್ ಕೋಲಿಯನ್ನು ದೋಷಿ ಎಂದು ಎಂದು ಇಲ್ಲಿನ ಸಿಬಿಐ ನ್ಯಾಯಾಲಯ ತೀರ್ಪಿತ್ತಿದೆ.

2006ರಲ್ಲಿ ನಡೆದಿದ್ದ ಈ ಪ್ರಕರಣದಲ್ಲಿ ಆರೋಪಿ ಸುರೀಂದರ್ ಕೋಲಿ ರಚನಾ ಎಂಬ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿದ ನಂತರ ಭೀಕರವಾಗಿ ಹತ್ಯೆ ಮಾಡಿರುವುದನ್ನು ಖಚಿತಪಡಿಸಿಕೊಂಡ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ಪರಿಗಣಿಸಿ ತೀರ್ಪಿತ್ತಿದೆ. 2006ರ ನಿಥಾರಿ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಸಿಬಿಐನ ವಿಶೇಷ ನ್ಯಾಯಾಲಯ ಇಂದು ಮೊನಿಂದರ್ ಪಂಧೇರ್ ಹಾಗೂ ಸುರೀಂದರ್ ಕೊಲಿಗೆ ಗಲ್ಲು ಶಿಕ್ಷೆ ವಿಧಿಸಿದೆ.

ಆರೋಪಿ ಕೋಲಿ ವಿರುದ್ಧ ಐಪಿಸಿ ಸೆಕ್ಷನ್302 ಕೊಲೆ ಆರೋಪ, 346ರ ಅಪಹರಣ ಹಾಗೂ ಹತ್ಯೆ,201ರ ಪ್ರಕಾರ ಸಾಕ್ಷ್ಯ ನಾಶ, 376ರ ಪ್ರಕಾರ ಅತ್ಯಾಚಾರಕ್ಕೆ ಶಿಕ್ಷೆ ಆರೋಪದಡಿ ವಿಶೇಷಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎ.ಕೆ.ಸಿಂಗ್ ಅವರು ದೋಷಿ ಎಂದು ತೀರ್ಪಿತ್ತಿದ್ದಾರೆ.

ಸರಣಿ ಹತ್ಯೆ ಪ್ರಕರಣ ರುವಾರಿಗಳು: ಒಟ್ಟು 122 ದಿನಗಳ ಕಾಲ ನಡೆದ ಈ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಒಟ್ಟು 46 ಸಾಕ್ಷಿಗಳನ್ನು ಪಡೆದಿದ್ದರು. 2006ರಲ್ಲಿ ತನ್ನ ಅಜ್ಜಿ ತಾತನ ಮನೆಗೆ ಹೊರಟಿದ್ದ 9 ವರ್ಷದ ರಚನಾ ಲಾಲ್ ಎಂಬ ಬಾಲಕಿಯನ್ನು ಅಪಹರಿಸಿದ್ದ ಕೋಲಿ ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿ ಭೀಕರವಾಗಿ ಹತ್ಯೆ ಮಾಡಿದ್ದ.

ಇದಾದ ನಂತರ ರಚನಾ ಪೋಷಕರು ನೀಡಿದ್ದ ನಾಪತ್ತೆ ದೂರಿನ ಜಾಡು ಹಿಡಿದು ತನಿಖೆ ನಡೆಸಿದ್ದ ಪೊಲೀಸರು, ಕೋಲಿ ಕೆಲಸ ಮಾಡುತ್ತಿದ್ದ ಮನೆಯ ಮಾಲೀಕ ಪಂಧೇರ್ ನಿವಾಸದಲ್ಲಿ ಪತ್ತೆ ಮಾಡಿದ್ದರು. ಸರಣಿ ಹತ್ಯೆ ಪ್ರಕರಣದಲ್ಲಿ ಪಂಧೇರ್ ಆರೋಪಿಯಾಗಿದ್ದರೂ, ಈ ಪ್ರಕರಣದಲ್ಲಿ ಮಾತ್ರ ಆತನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿರಲಿಲ್ಲ.

ಈ ಪ್ರಕರಣ ನಂತರ ನಿಥಾರಿ ಸರಣಿ ಹತ್ಯೆಯ ಇನ್ನೂ 13 ಕೊಲೆ, ಅತ್ಯಾಚಾರ ಪ್ರಕರಣಗಳ ತನಿಖೆ ನಡೆಯಬೇಕಿದೆ. ಕೋಲಿ ಹಾಗೂ ಪಂಧೇರ್ ವಿರುದ್ಧ ಯುವಕರು, ಮಹಿಳೆಯರೂ ಸೇರಿದಂತೆ 19 ಕೊಲೆ, ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈಗಾಗಲೇ ಮೊದಲನೇ ಪ್ರಕರಣದಲ್ಲಿ ಕೋಲಿ ಹಾಗೂ ಪಂಧೇರ್ ಇಬ್ಬರೂ ಗಲ್ಲುಶಿಕ್ಷೆಗೆ ಗುರಿಯಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X