ಮಿರ್ಜಿ ಎತ್ತಂಗಡಿ; ಗುಪ್ತಚರ ಐಜಿಪಿ ಹುದ್ದೆಗೆ ಹೊಸೂರ್
ಬೆಂಗಳೂರು,
ಸೆ.25: ರಾಜ್ಯ ಗುಪ್ತಚರ ಐಜಿಪಿ ಹುದ್ದೆಗೆ ನೂತನವಾಗಿ ಹಿರಿಯ ಐಪಿಎಸ್ ಅಧಿಕಾರಿ ಗೋಪಾಲ್ ಬಿ ಹೊಸೂರ್ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿದೆ. ಇದುವರೆಗೂ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿ ಜಿ ಜ್ಯೋತಿ ಪ್ರಕಾಶ್ ಮಿರ್ಜಿ ಅವರನ್ನು ರೈಲ್ವೆ ಎಡಿಜಿಪಿ ಹುದ್ದೆಗೆ ವರ್ಗಾಯಿಸಲಾಗಿದೆ. id="toptextpromo">ಗುಲ್ಬರ್ಗ
ಮರುಚುನಾವಣೆಯಲ್ಲಿ ಅಲ್ಲಿನ ನಾಡಿಮಿಡಿತ ಅರಿಯಲು ವಿಫಲಾರಾಗಿದ್ದೇ ಮಿರ್ಜಿ ಅವರಿಗೆ ಮುಳುವಾಗಿದೆ. ಅವರಿಗೆ ಈಗ ರೈಲ್ವೆ ಎಡಿಜಿಪಿ ಹುದ್ದೆಗೆ ಎತ್ತಂಗಡಿ ಮಾಡಲಾಗಿದೆ. ಅಲ್ಲಿದ್ದ ಕೆ ಎಸ್ ಎನ್ ಚಿಕ್ಕೆರೂರ್ ಅವರನ್ನು ಸಿಐಡಿ ಅರಣ್ಯ ಘಟಕಕ್ಕೆ ವರ್ಗಾಯಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಸುಮಾರು
ಒಂದು ತಿಂಗಳ ಹಿಂದಷ್ಟೇ ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ (ಕಾನೂನು ಮತ್ತು ಸುವ್ಯವಸ್ಥೆ) ಹೊಸೂರ್ ಅಧಿಕಾರ ವಹಿಸಿಕೊಂಡಿದ್ದರು. ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ತೀರ್ಪು ಹೊರಬೀಳುವ ಸಂದರ್ಭದಲ್ಲಿ ಹೊಸೂರ್ ಅವರನ್ನು ಆಯ್ಕೆ ಮಾಡಿರುವುದು ಗಮನಾರ್ಹ.











Click it and Unblock the Notifications