ಸಿದ್ದು ರಾಜೀನಾಮೆ ತಿರಸ್ಕರಿಸಿದ ಸೋನಿಯಾ
ಬೆಂಗಳೂರು,
ಸೆ. 24 : ಇತ್ತೀಚೆಗೆ ನಡೆದ ಉಪಚುನಾವಣೆಯ ಸೋಲಿನ ಹೊಣೆಹೊತ್ತು ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತಿರಸ್ಕರಿಸಿದ್ದಾರೆ. id="toptextpromo">ಉಪಚುನಾವಣೆ
ಫಲಿತಾಂಶ ಅನಿರೀಕ್ಷಿತವಾಗಿದೆ. ಸೋಲಿನ ಹೊಣೆ ಕೆಪಿಸಿಸಿಯ ಎಲ್ಲ ನಾಯಕರ ಮೇಲೂ ಆಗಿದೆ. ಹೀಗಾಗಿ ಸೋಲಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಪಕ್ಷದ ಸಂಘಟನೆಗೆ ಮುಂದಾಗುವಂತೆ ಹೈಕಮಾಂಡ್ ಸೂಚಿಸಿದೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಸೋಲಿನ ಕಹಿಯನ್ನು ಮರೆತು ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಸ್ವತಃ ಸೋನಿಯಾ ಗಾಂಧಿ ಅವರೇ ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>ಆದರೆ,
ಸಿದ್ದರಾಮಯ್ಯ ಮಾತ್ರ ರಾಜೀನಾಮೆಯನ್ನು ಹಿಂದಕ್ಕೆ ಪಡೆಯಲಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿತ್ತು. ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸವನ್ನು ಅಲ್ಲಿನ ಮತದಾರ ಹುಸಿಗೊಳಿಸಿದ್ದರು. ಕಡೂರಿನಲ್ಲಿ ಬಿಜೆಪಿ ವಿಶ್ವನಾಥ ಆಯ್ಕೆಯಾದರೆ, ಗುಲ್ಬರ್ಗ ದಕ್ಷಿಣದಲ್ಲಿ ಜೆಡಿಎಸ್ ನಿಂದ ಅರುಣಾ ಪಾಟೀಲ್ ರೇವೂರು ಜಯಭೇರಿ ಬಾರಿಸಿದ್ದಾರೆ.











Click it and Unblock the Notifications