ಏಳು ಆನೆಗಳನ್ನು ಕೊಂದ ಗೂಡ್ಸ್ ರೈಲು
ಜಲ್‌ಪಾಯಗುರಿ,
(ಪಶ್ಚಿಮ ಬಂಗಾಳ) ಸೆ. 23 : ಇಲ್ಲಿನ ಬಿನ್ನಾಗುರಿ ಪ್ರದೇಶದ ಬಳಿ ರೈಲ್ವೆ ಹಳಿ ದಾಟುತ್ತಿದ್ದ ಆನೆಗಳಿಗೆ ಗೂಡ್ಸ್ ರೈಲೊಂದು ಡಿಕ್ಕಿ ಹೊಡೆದಿದ್ದರಿಂದ ಏಳು ಆನೆಗಳು ಸಾವಿಗೀಡಾದ ದಾರುಣ ಘಟನೆ ಜಲಪಾಯಗುರಿಯಲ್ಲಿ ನಡೆದಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ. id="toptextpromo">ಬುಧವಾರ
ತಡರಾತ್ರಿ ರೈಲ್ವೆ ಹಳಿ ದಾಟುತ್ತಿದ್ದ ಆನೆಗಳಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮವಾಗಿ ಐದು ಆನೆಗಳು ಸ್ಥಳದಲ್ಲೇ ಪ್ರಾಣ ಬಿಟ್ಟರೆ, ಎರಡು ಆನೆಗಳು ಗುರುವಾರ ಬೆಳಗ್ಗೆ ಕೊನೆಯುಸಿರೆಳೆದವು ಎಂದು ವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಪ್ರಾಣಿ) ಸುನಿತಾ ಘಾಟ್ಕ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕಳೆದ
ರಾತ್ರಿ ದಯಾನ ಪ್ರಾಂತ್ಯದ ಮೊರಾಘಾಟ್ ಅರಣ್ಯ ಪ್ರದೇಶದಲ್ಲಿ ಆನೆಗಳ ದಂಡೊಂದು ರೈಲ್ವೆ ಹಳಿ ದಾಟುತ್ತಿತ್ತು. ರೈಲು ವೇಗವಾಗಿ ಹಳಿಯಲ್ಲಿ ಸಾಗಿ ಬರುತಿತ್ತು. ಆಗ ಆನೆಗಳು ಹಳಿಯನ್ನು ದಾಟಿ ಮುಂದೆ ಸಾಗಿದ್ದವಾದರೂ, ಎರಡು ಮರಿ ಆನೆಗಳು ಹಳಿಯಲ್ಲೇ ಬಾಕಿಯುಳಿದಿದ್ದವು. ಅವುಗಳನ್ನು ರಕ್ಷಿಸುವುದಕ್ಕಾಗಿ ಇನ್ನುಳಿದ ಆನೆಗಳು ಧಾವಿಸಿದ್ದವು. ಆದರೆ ಅಷ್ಟರಲ್ಲಿ ವೇಗವಾಗಿ ಧಾವಿಸಿದ ಗೂಡ್ಸ್ ರೈಲು ಆನೆಗಳಿಗೆ ಢಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಐದು ಆನೆಗಳು ಸ್ಥಳದಲ್ಲೇ ಸಾವನ್ನಪ್ಪಿ, ಮೂರು ಆನೆಗಳಿಗೆ ಗಂಭೀರ ಗಾಯವಾಗಿತ್ತು ಎಂದು ಅವರು ತಿಳಿಸಿದ್ದಾರೆ.











Click it and Unblock the Notifications