ರೊಕ್ಕ ಕೊಡ್ಲಿಲ್ಲ ಅದಕ್ಕೆ ಮಂತ್ರಿಗಿರಿ ತಪ್ಪಿತು!

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ ಜನ ತನಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದರು. ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರು ಅದಕ್ಕೆ ಸ್ಪಂದಿಸದ ಕಾರಣ ನೋವಾಗಿದೆ ಎಂದರು. ಪ್ರಾಮಾಣಿಕತೆ, ಪಕ್ಷ ನಿಷ್ಠೆ, ಸೈದ್ಧಾಂತಿಕ ಹೋರಾಟ ನಡೆಸಿ ಬಂದವರಿಗೆ ಬಿಜೆಪಿಯಲ್ಲಿ ಸ್ಥಾನಮಾನ ಇಲ್ಲ. ವ್ಯವಹಾರದ ದೃಷ್ಟಿಯಿಂದ ಬಂದವರಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ಇದರಿಂದ ತನಗೆ ಅತೀವ ನೋವಾಗಿದೆ ಎಂದು ರವಿ ಹೇಳಿದರು.
ಕಳ್ಳರ, ಸುಳ್ಳರ ಕಾಲವಯ್ಯ
ಪಕ್ಷದಲ್ಲಿ ನಿಷ್ಠಾವಂತರಿಗೆ ಅವಕಾಶವಿಲ್ಲ. ಕಳ್ಳರು, ಸುಳ್ಳರಿಗೆ ಕಾಲ ಎಂದು ಹಿರಿಯ ಬಿಜೆಪಿ ಶಾಸಕ ಶಂಕರಲಿಂಗೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಪುಟದಲ್ಲಿ ಸ್ಥಾನ ಕೈತಪ್ಪಿತು ಎನ್ನುವುದು ಖಾತ್ರಿಯಾಗುತ್ತಿದ್ದಂತೆಯೇ ಮಾಧ್ಯಮಗಳ ಮುಂದೆ ಬಂದ ಶಂಕರಲಿಂಗೇಗೌಡ, ನನ್ನ ಬಳಿ ಸೂಟ್ ಕೇಸ್ ಇಲ್ಲ. ಹೀಗಾಗಿ ನನಗೆ ಸಂಪುಟದಲ್ಲಿ ಅವಕಾಶ ಸಿಗಲಿಲ್ಲ ಎಂದು ಅವರು ಕಿಡಿಕಾರಿದರು.












Click it and Unblock the Notifications