ಐಟಿ ಸಿಟಿಯಲ್ಲಿ ವರದಕ್ಷಿಣೆ ಭೂತಕ್ಕೆ ಗೃಹಿಣಿ ಬಲಿ
ಬೆಂಗಳೂರು,
ಸೆ.21: ಹೈಟೆಕ್ ಸಿಟಿ ಬೆಂಗಳೂರಿನಲ್ಲಿ ಇನ್ನೂ ವರದಕ್ಷಿಣೆ ಪಿಡುಗು ಕಮ್ಮಿಯಾಗಿಲ್ಲ. ಪ್ರೀತಿಸಿ ಮದುವೆಯಾದರೂ ಗಂಡನ ಕಿರುಕುಳ ತಾಳಲಾರದೆ ಗೃಹಿಣಿ ಪ್ರಾಣ ಕಳೆದುಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳಕ್ಕೆ ಮಾಗಡಿ ರಸ್ತೆಯ ಚೋಳೂರು ಪಾಳ್ಯದ ನಿವಾಸಿ ವಾಣಿ (25)ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾರ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿರುವ ನರಸಿಂಹಮೂರ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದಳು. id="toptextpromo">ಇವರಿಗೆ
ಚೈತನ್ಯ ಎಂಬ ಒಂದು ವರ್ಷದ ಹೆಣ್ಣು ಮಗುವಿದೆ. ಪತಿ ನರಸಿಂಹಮೂರ್ತಿ ಪತ್ನಿಗೆ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದನು. ಎರಡು ಬಾರಿ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ತವರು ಮನೆಗೆ ಕಳುಹಿಸಿದ್ದನು. ಪ್ರತಿ ಬಾರಿ ಹಣ ಇಲ್ಲದಿದ್ದಾಗ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪೀಡಿಸುತ್ತಿದ್ದನು. ಇದರಿಂದ ಬೇಸತ್ತ ವೀಣಾ ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. id='are-slot-1' class='oiad oi-axt oiadv'> id='top-searched-articles'>ಆದರೆ
ತನ್ನ ಮಗಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿ ಅಲ್ಲ ಎಂದು ವೀಣಾ ತಾಯಿ ಮಂಗಳ ಮಾಗಡಿ ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಪತಿಯೇ ಪತ್ನಿಗೆ ವಿಷ ನೀಡಿ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.











Click it and Unblock the Notifications