ಮುಂಬೈ ಭಯೋತ್ಪಾದನೆ : ಕಸಬ್ ಶಿಕ್ಷೆ ವಿಚಾರಣೆ ಅ.18ಕ್ಕೆ
ಮುಂಬೈ,
ಸೆ. 21 : ಅಕ್ಟೋಬರ್ 18ರಂದು ಮುಂಬೈ ಭಯೋತ್ಪಾದನೆಯ ಪ್ರಮುಖ ಅಪರಾಧಿ ಅಜ್ಮಲ್ ಅಮೀರ್ ಕಸಬ್‌ನ ಮರಣ ದಂಡನೆ ವಿಚಾರಣಾ ಪ್ರಕ್ರಿಯೆ ನಡೆಯುವುದು ಖಚಿತವಾಗಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಒಂದು ವೇಳೆ ಆತ ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದರೂ ವಿಚಾರಣೆ ಮುಂದೂಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. id="toptextpromo">ಪಾಕಿಸ್ತಾನಿ
ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ಆತನನ್ನು ನ್ಯಾಯಾಲಯಕ್ಕೆ ಕರೆ ತರುವುದು ದೊಡ್ಡ ಸಮಸ್ಯೆಯಾಗಿದ್ದರಿಂದ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಹಾಜರಾಗುವಂತೆ ನ್ಯಾಯಾಲಯ ಅವನಿಗೆ ಸಲಹೆ ನೀಡಿದೆ. ಬಾಂಬೆ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ರಂಜನ್ ದೇಸಾಯಿ ಹಾಗೂ ಆರ್ ವಿ ಮೋರೆ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. id='are-slot-1' class='oiad oi-axt oiadv'> id='top-searched-articles'>2008,
ನವೆಂಬರ್ 26ರಂದು ಪಾಕ್ ಪ್ರಚೋದಿತ 10 ಮಂದಿ ಉಗ್ರರು ಸಮುದ್ರದ ಮೂಲಕ ಭಾರತ ಪ್ರವೇಶಿಸಿ ಮುಂಬೈಯಲ್ಲಿ ಭಾರಿ ಭಯೋತ್ಪಾದನೆ ನಡೆಸಿದ್ದರು. ಈ ಕೃತ್ಯದಲ್ಲಿ ಹಿರಿಯ ಅಧಿಕಾರಿಗಳು ಸೇರಿ 185 ಮಂದಿ ಸಾವನ್ನಪ್ಪಿದ್ದರು.











Click it and Unblock the Notifications