ಮೈಸೂರು : ಬೀದಿ ನಾಯಿಗಳಿಗೆ ಬಾಲಕ ಬಲಿ

ಬೆಳಗಿನ ಜಾವದಲ್ಲಿ ನಾಗೇಂದ್ರ ಎಂಬ ಪುಟ್ಟ ಬಾಲಕ ಮೂತ್ರ ವಿಸರ್ಜನೆಗಾಗಿ ಮನೆಯಿಂದ ಹೊರಬಂದಾಗ ಬೀದಿ ನಾಯಿಗಳು ದಾಳಿ ನಡೆಸಿವೆ. ಒಂದು ನಾಯಿ ಬಾಲಕನ ಕುತ್ತಿಗೆಗೆ ಬಾಯಿ ಹಾಕಿ ಸ್ವಲ್ಪ ದೂರ ಎಳೆದೊಯ್ದಿದೆ.
ಬಾಲಕನ ಆಕ್ರಂದನ ಕೇಳಿ ನೆರೆಹೊರೆಯವರೆಲ್ಲ ಬೀದಿಗೆ ಧಾವಿಸಿ ಬಂದಿದ್ದಾರೆ. ನಾಯಿಗಳನ್ನು ದೂರ ಅಟ್ಟಲು ಜನರು ಯಶಸ್ವಿಯಾದರೂ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದ. ನಾಗೇಂದ್ರ, ಮೂರ್ತಿ ಮತ್ತು ಚಂದ್ರಕಲಾ ಅವರ ಏಕೈಕ ಮಗ.
ಈ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು. ಕಸಾಯಿ ಅಂಗಡಿಗಳನ್ನು ಹಳ್ಳಿಯಿ ಹೊರವಲಯದಲ್ಲಿ ಸಾಗಿಸಬೇಕು ಎಂದು ಆಗ್ರಹಿಸಿದರು. ಮಾಂಸದ ಅಂಗಡಿಗಳಿದ್ದರಿಂದಲೇ ನಾಯಿಗಳೆಲ್ಲ ಸುತ್ತಮುತ್ತಲೇ ಬೀಡುಬಿಟ್ಟಿದ್ದು, ಅವುಗಳ ಉಪಟಳ ಮಿತಿಮೀರಿದೆ ಎಂದು ದೂರಿದ್ದಾರೆ.












Click it and Unblock the Notifications