ಸಚಿವ ಗೂಳಿಹಟ್ಟಿ ಆತ್ಮಹತ್ಯೆ ಮಾಡಿಕೊಳ್ತಾರಂತೆ!

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಪಕ್ಷಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದೇವೆ. ನನ್ನನ್ನು ಸಂಪುಟದಿಂದ ತೆಗೆದು ಹಾಕುವುದಿಲ್ಲ ಎಂಬ ವಿಶ್ವಾಸವಿದೆ ಎಂದರು. ಬಿಜೆಪಿಯಿಂದ ಕೇವಲ 110 ಶಾಸಕ ಆಯ್ಕೆಯಾದಾಗ, ಪಕ್ಷೇತರ ಶಾಸಕರಾದ ನಾವುಗಳು ಬೆಂಬಲಕ್ಕೆ ನಿಂತಿದ್ದರಿಂದ ಯಡಿಯೂರಪ್ಪ ನೇತೃತ್ವದ ಸರಕಾರ ರಚನೆಯಾಗಲು ಸಾಧ್ಯವಾಯಿತು. ಆ ಸಮಯದಲ್ಲಿ ಯಡಿಯೂರಪ್ಪ ವಚನಕೊಟ್ಟಂತೆ ನಡೆದುಕೊಳ್ಳುತ್ತಾರೆ ಎಂದು ಗೂಳಿಹಟ್ಟಿ ಶೇಖರ್ ಹೇಳಿದರು.
ಯಡಿಯೂರಪ್ಪ ಸರಕಾರಕ್ಕೆ ಬೆಂಬಲ ನೀಡಿದ ಪಕ್ಷೇತರ ಸಚಿವರೆಲ್ಲಾ ಒಂದಾಗಿದ್ದೇವೆ. ಈ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದೇವೆ. ಸಚಿವ ಸ್ಥಾನವನ್ನು ಕಸಿದುಕೊಂಡರೆ ಮುಂದೇನು ಮಾಡಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ಅವರು ಗುಡುಗಿದ್ದಾರೆ. ಗೂಳಿಹಟ್ಟಿ ಅವರನ್ನು ಸಂಪುಟದಿಂದ ಕೈಬಿಡಲು ಮುಖ್ಯಮಂತ್ರಿ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ.
ಅದರಂತೆ, ಎಸ್ ಎ ರವೀಂದ್ರನಾಥ, ಆನಂದ್ ಅಸ್ನೋಟಿಕರ್, ಅರವಿಂದ ಲಿಂಬಾವಳಿ, ಡಿ ಸುಧಾಕರ್ ಅವರನ್ನು ಸಂಪುಟದಿಂದ ಕೈಬಿಡುವ ಎಲ್ಲ ಲಕ್ಷಣಗಳು ಇವೆ. ಶೋಭಾ ಕರಂದ್ಲಾಜೆ, ಸೋಮಣ್ಣ ಸಂಪುಟ ಸೇರುವುದು ಖಾತ್ರಿಯಾಗಿದ್ದು, ಉಳಿದ ಹೆಸರುಗಳು ಅಂತಿಮಗೊಂಡಿಲ್ಲ. ಒಟ್ಟು ಏಳು ಹೊಸ ಮುಖಗಳು ಸಂಪುಟಕ್ಕೆ ಸೇರ್ಪಡೆಯಾಗಲಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.












Click it and Unblock the Notifications