ಬಾಬ್ರಿ ತೀರ್ಪು ಮುಂದೂಡದಂತೆ ಮನವಿ

ಅಯೋಧ್ಯೆ ವಿವಾದ ಕುರಿತು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠದ ಮುಂದೆ ಹಿಂದೂ ಮಹಾಸಭಾ ಪರವಾಗಿ ಎಸ್.ಎಸ್. ಜೈನ್ ಅರ್ಜಿ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 24ರಂದು ಆಯೋಧ್ಯೆಯ ವಿವಾದಿತ ಸ್ಥಳದ ಒಡೆತನದ ಕುರಿತು ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಕಟಿಸುವುದಾಗಿ ಈಗಾಗಲೇ ತಿಳಿಸಿದೆ. ತೀರ್ಪು ಹೊರಬಂದರೆ ಭದ್ರತಾ ಪರಿಸ್ಥಿತಿ ಹದಗೆಡುವ ಸಾಧ್ಯತೆ ಇದೆ.
ಕಾಮನ್‌ವೆಲ್ತ್ ಕ್ರೀಡಾಕೂಟದ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ವಿವಾದಿತ ಪ್ರಕರಣದ ಕುರಿತು ತೀರ್ಪು ಮುಂದೂಡುವುದು ಸೂಕ್ತ ಎಂದು ಹೈಕೋರ್ಟ್ ಈಗಾಗಲೇ ಎರಡು ಅರ್ಜಿ ಸಲ್ಲಿಸಲಾಗಿದೆ. ಇಂದು ಈ ಎರಡೂ ಅರ್ಜಿಗಳ ಕುರಿತು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಡಿ.ವಿ. ಶರ್ಮಾ, ಈ ವಿವಾದಕ್ಕೆ ಸಂಬಂಧಿಸಿದ ಎಲ್ಲ ಪಕ್ಷದವರೂ ಸೆ.17ರಂದು ಖುದ್ದು ಹಾಜರಾಗಿ ಸೌಹಾರ್ದಯುತವಾಗಿ ಪರಿಹಾರ ಕಂಡುಕೊಳ್ಳಲು ಸಲಹೆ ನೀಡಿದ್ದರು.
ಮುಜಫ್ಫರ್ ನಗರ : ಅಯೋಧ್ಯೆಯ ವಿವಾದಿತ ಸ್ಥಳದ ಒಡೆತನದ ಕುರಿತು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ನೀಡುವ ತೀರ್ಪಿಗೆ ಎಲ್ಲರೂ ಬದ್ಧರಾಗಿರಬೇಕೆಂದು ಪ್ರಮುಖ ಇಸ್ಲಾಮಿಕ್ ಸಂಘಟನೆ ದಾರುಲ್ ಉಲೂಂ ದಿಯೊಬಂದ್ ಮನವಿ ಮಾಡಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ವಿಶ್ವಾಸವಿದೆ. ದಶಕಗಳ ಇತಿಹಾಸದ ವಿವಾದದ ಕುರಿತು ನ್ಯಾಯಾಲಯ ನೀಡುವ ತೀರ್ಪಿಗೆ ಎಲ್ಲರೂ ತಲೆಬಾಗಬೇಕು. ದೇಶದ ಸಾಮರಸ್ಯ ಕಾಪಾಡಬೇಕೆಂದು ಸಂಘಟನೆಯ ಉಪ ಕುಲಪತಿ ಮೌಲಾನಾ ಅಬ್ದುಲ್ ಖಲೀಕಿ ಮದ್ರಾಸಿ ತಿಳಿಸಿದ್ದಾರೆ.











Click it and Unblock the Notifications