ಪುಟ್ಟರಾಜ ಶ್ರೀಗಳ ಆರೋಗ್ಯ ಸುಧಾರಣೆ

ಬುಧವಾರ ಸಂಜೆ ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ ಅವರು, ಡಾ ಪಂಡಿತ ಪುಟ್ಟರಾಜರ ಎಲ್ಲ ರೀತಿಯಿಂದಲೂ ಚೇತರಿಕೆ ಕಾಣುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ವೈದ್ಯರ ತಂಡ ಪುಣ್ಯಾಖ್ರಮದಲ್ಲಿಯೇ ಬೀಡುಬಿಟ್ಟಿದ್ದು, ಕಾಲಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರಲ್ಲದೇ ಆರೋಗ್ಯ ಚೇತರಿಕೆಗಾಗಿ ಬೇಕಾಗುವ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಂಗೀತ ವಿವಿಗೆ ಪುಟ್ಟರಾಜರ ಹೆಸರು : ಸಂಗೀತ ವಿವಿಗೆ ಡಾ ಪುಟ್ಟರಾಜರ ಹೆಸರು, ಕರ್ನಾಟಕ ರತ್ನ, ಮ್ಯೂಸಿಯಂ ರಚನೆ ಸೇರಿದಂತೆ ಗವಾಯಿಗಳ ಭಕ್ತರ ಹಲವು ವರ್ಷಗಳ ಬೇಡಿಕೆ ಈಡೇರಿಸಲು ಸರಕಾರ ಬದ್ಧವಾಗಿದೆ ಎಂದು ಸಚಿವರಾದ ಸಿಎಂ ಉದಾಸಿ, ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ ಸಚಿವದ್ವಯರು, ಪುಟ್ಟರಾಜ ಗವಾಯಿಗಳು ವಿಶ್ವಮಾನ್ಯರಾಗಿದ್ದು, ಅವರಿಗೆ ಸರಕಾರ ಎಲ್ಲ ಗೌರವಗಳನ್ನು ನೀಡಲು ಸಿದ್ಧವಾಗಿದೆ ಎಂದು ಹೇಳಿದರು.
ಪಂಡಿತ ಪುಟ್ಟರಾಜ ಗವಾಯಿಗಳು ಗದಗಿನಲ್ಲಿ ಲಿಂಗೈಕ್ಯ












Click it and Unblock the Notifications