ಸೆ.20ರಿಂದ ಪೆಟ್ರೋಲ್ ಪಂಪ್ ಮಾಲೀಕರ ಮುಷ್ಕರ
ನವದೆಹಲಿ,
ಸೆ.15: ಪೆಟ್ರೋಲ್ ಪಂಪ್ ಮಾಲೀಕರು ಸೆಪ್ಟೆಂಬರ್ 20 ರಿಂದ ದೇಶದಾದ್ಯಂತ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ತೈಲ ಮಾರಾಟದ ಮೇಲೆ ಕಮಿಷನ್ ನೀಡುವ ಕುರಿತು ಇಂಧನ ಸಚಿವಾಲಯದ ಜೊತೆಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಪೆಟ್ರೋಲ್ ಪಂಪ್ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ. id="toptextpromo"> ತೈಲ ಮಾರಾಟದ ಮೊತ್ತದ ಶೇ.5ರಷ್ಟು ಹಣವನ್ನು ಕಮಿಷನ್ ರೂಪದಲ್ಲಿ ನೀಡಬೇಕು ಎಂಬುದು ಪಂಪ್ ಮಾಲೀಕರ ಬೇಡಿಕೆ. ಈ ಸಂಬಂಧ ಸಚಿವಾಲಯ ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿದೆ. ಕಮಿಷನ್ ಹೆಚ್ಚಿಸಿದರೆ ತೈಲ ಬೆಲೆ ಹೆಚ್ಚಳವಾಗುತ್ತದೆ ಎಂಬ ಕಾರಣಕ್ಕೆ ಪಂಪ್ ಮಾಲೀಕರ ಬೇಡಿಕೆಯನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸದ್ಯಕ್ಕೆ
ಪಂಪ್ ಮಾಲೀಕರಿಗೆ ನಿಗದಿತ ಪ್ರಮಾಣದಲ್ಲಿ ಕಮಿಷನ್ ನೀಡಲಾಗುತ್ತಿದೆ. ಕಮಿಷನ್ ಹೆಚ್ಚಿಸಿದರೆ ಗ್ರಾಹಕರಿಗೆ ಹೊರೆಯಾಗುತ್ತದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ನಮ್ಮ (ಪಂಪ್ ಮಾಲೀಕರ) ಬೇಡಿಕೆಯನ್ನು ತಿರಸ್ಕರಿಸಿದೆ. ನಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರ ನಡೆಸುತ್ತೇವೆ. ಸೆ.20ರಿಂದ ತೈಲ ಮಾರಾಟ ನಿಲ್ಲಿಸುವುದಾಗಿ ಅಖಿಲ ಭಾರತ ಪೆಟ್ರೋಲಿಯಂ ವ್ಯಾಪಾರಸ್ಥರ (ಎಫ್‌ಎಐಪಿಟಿ) ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್ ಬನ್ಸಾಲ್ ತಿಳಿಸಿದ್ದಾರೆ.











Click it and Unblock the Notifications