ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೋಲ್ವೋ ದರದಲ್ಲೇ ಬೆಂಜ್ ನಲ್ಲಿ ಓಡಾಡಿ

By Mahesh
|
Google Oneindia Kannada News

Mercedes Benz service starts in Karnataka
ಬೆಂಗಳೂರು, ಸೆ.15: ಕರ್ನಾಟಕದ ನಾಗರೀಕರಿಗೆ ಐಷಾರಾಮಿ ಬಸ್ ಪಯಣದ ಸುಖ ನೀಡಬೇಕು ಎಂದು ಸಂಕಲ್ಪ ಮಾಡಿಕೊಂಡಿರುವ ಮಾನ್ಯ ಸಾರಿಗೆ ಸಚಿವ ಅಶೋ ಕ್ ಅವರು ಇಂದು ಮರ್ಸಿಡಿಸ್ ಬೆಂಜ್ ಬಸ್ ಗಳಿಗೆ ಚಾಲನೆ ನೀಡಿದರು.

ಬೆಂಗಳೂರು- ಮೈಸೂರು, ಬೆಂಗಳೂರು-ಶಿವಮೊಗ್ಗ, ಬೆಂಗಳೂರು- ಹೈದರಾಬಾದ್ ಹಾಗೂ ಬೆಂಗಳೂರು ತಿರುಪತಿ ನಡುವೆ ಸಂಚರಿಸಲಿರುವ ಬೆಂಜ್ ಬಸ್ ಗಳಿಗೆ ಚಾಲನೆ ನೀಡಿದ ಸಚಿವ ಅಶೋಕ್ , ಬೆಂಜ್ ಬಸ್ ದರವನ್ನು ವೋಲ್ವೋ ಬಸ್ ದರಕ್ಕೆ ಇಳಿಸಲಾಗಿದ್ದು, ಸಾಮಾನ್ಯ ಪ್ರಯಾಣಿಕರು ಆರಾಮವಾಗಿ ಸಂಚರಿಸಬಹುದಾಗಿದೆ ಎಂದರು.

ಬೆಂಗಳೂರಿನಿಂದ ಮೈಸೂರಿಗೆ 260 ರು, ಶಿವಮೊಗ್ಗಕ್ಕೆ 416, ತಿರುಪತಿಗೆ370, ಚೆನ್ನೈಗೆ620 ಹಾಗೂ ಹೈದರಾಬಾದ್ ಗೆ 780 ರು ಟಿಕೆಟ್ ದರ ವಿಧಿಸಲಾಗಿದೆ. ಕರಾರಸಾಸಂ ಒಟ್ಟು 10 ಬಸ್ ಗಳನ್ನು 68 ಲಕ್ಷ ರು ನೀಡಿ ಖರೀದಿಸಿದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಈ ಸೌಲಭ್ಯವನ್ನು ಗುಲ್ಬರ್ಗಾಹಾಗೂ ಬೆಳಗಾವಿಗೂ ವಿಸ್ತರಿಸಲಾಗುವುದು ಎಂದು ಅರ್. ಆಶೋಕ್ ಹೇಳಿದರು.

ಬೆಂಜ್ ಬಸ್ ಚಾಲಕರಿಗೆ ಪುಣೆಯಲ್ಲಿ ವಿಶೇಷ ತರಬೇತಿ ನೀಡಲಾಗಿದೆ. ಅಪಘಾತ ತಪ್ಪಿಸುವುದಕ್ಕೆ, ಆರಾಮದಾಯಕ ಪಯಣಕ್ಕೆ ಮರ್ಸಿಡಿಸ್ ಬೆಂಜ್ ಉತ್ತಮ ಸಾರಿಗೆ ವ್ಯವಸ್ಥೆಯಾಗಿದೆ ಎಂದು ಬೆಂಜ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಡಾ.ವಿಲ್ ಫ್ರೆಡ್ ಅಲ್ ಬರ್ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X