ಕಲ್ಲಿನ ಸುರಿಮಳೆ ತಪ್ಪಿಸಿಕೊಂಡ ನಾಯ್ಡು

TRS workers attack Chandrababu Naidu's convoy
ಹೈದರಾಬಾದ್, ಸೆ.13: ತೆಲಂಗಾಣ ರಾಷ್ಟ್ರ ಸಮಿತಿ(TRS ) ಪ್ರತ್ಯೇಕತಾವದಿ ಕಾರ್ಯಕರ್ತರು ಇಂದು ರಂಗಾರೆಡ್ಡಿ ಜಿಲ್ಲೆ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬೆಂಗವಾಲು ಪಡೆ ವಾಹನದ ಮೇಲೆ ಕಲ್ಲುಗಳನ್ನು ಎಸೆದು ಘೋಷಣೆ ಕೂಗಿದ್ದಾರೆ.

ಹೈದರಾಬಾದ್ ನಿಂದ ಸುಮಾರು 70 ಕಿ.ಮೀ ದೂರವಿರುವ ಪರ್ಗಿಎಂಬಲ್ಲಿ ನಡೆದ ಈ ಘಟನೆಯಲ್ಲಿ ನಾಲ್ಕು ಜನರಿಗೆ ಗಾಯಗಳಾಗಿವೆ. ಗಾಯಗೊಂಡವರಲ್ಲಿ ಪೊಲೀಸ್ ಹಾಗೂ ಮಾಧ್ಯಮದವರು ಇದ್ದಾರೆ ಎಂದು ತಿಳಿದು ಬಂದಿದೆ. ಪ್ರತಿಭಟನಾಕಾರರು ಕಲ್ಲು ಎಸೆಯುತ್ತ್ತಿರುವುದನ್ನು ಕಂಡ ತಕ್ಷಣ ನಾಯ್ಡು ಅವರ ವಾಹನ ಚಾಲಕ ಚಾಕಚಕ್ಯತೆಯಿಂದ ಬೇರೆಡೆ ವಾಹನವನ್ನು ತಿರುಗಿಸಿ, ಅಪಾಯದಿಂದ ಪಾರುಮಾಡಿದ್ದಾನೆ.

ಮೆಹಬೂಬ್ ನಗರದ ರೈತರ ಸಮಸ್ಯೆಗಳ ಬಗ್ಗೆ ಆಲಿಸಲು ತೆರಳುತ್ತಿದ್ದ ನಾಯ್ಡು ಸ್ವಲ್ಪದರಲ್ಲೇ ಬಚಾವಾಗಿದ್ದಾರೆ. ರಾಯಲಸೀಮ ಪ್ರದೇಶದ ನಾಯ್ಡು, ತೆಲಂಗಾಣ ಪ್ರತ್ಯೇಕತಾವಾದಿಗಳ ಕೆಂಗಣ್ಣಿಗೆ ಹಲವು ಬಾರಿ ಗುರಿಯಾಗಿದ್ದಾರೆ.

ಇಂದು ಪರ್ಗಿಯಲ್ಲಿ ಪಕ್ಷದ ಶಾಸಕ ಹರೀಶ್ವರ್ ರೆಡ್ಡಿ ಮನೆಯಲ್ಲಿ ಉಪಾಹಾರ ಸೇವಿಸುತ್ತಿದ್ದ ಸಂದರ್ಭದಲ್ಲೇ ಟಿಆರ್ ಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಮನೆಯನ್ನು ಸುತ್ತುವರೆದು ಘೋಷಣೆ ಕೂಗತೊಡಗಿದರು. ಟಿಡಿಪಿ ಹಾಗೂ ಟಿಆರ್ ಎಸ್ ಕಾರ್ಯಕರ್ತರು ಮಾರಾಮಾರಿ ನಡುವೆ ಪೊಲೀಸರು ಸಿಕ್ಕಿಹಾಕಿಕೊಂಡಿದ್ದರು.

ಗಲಭೆ ಹೆಚ್ಚಾದ ಹಿನ್ನೆಲೆಯಲ್ಲಿ ಕಾರು ಹತ್ತಿ ಅಲ್ಲಿಂದ ಸಾಗಿದ ನಾಯ್ಡು ಕಾರು ಸೇರಿದಂತೆ ಬೆಂಬಲಿಗರ ವಾಹನಗಳ ಮೇಲೆ ತೆಲಂಗಣಾ ಕಾರ್ಯಕರ್ತರು ಕಲ್ಲು ಎಸೆಯಲು ಆರಂಭಿಸಿದರು. ನಾಯ್ಡು ಮೇಲೆ ಕಲ್ಲು ಎಸೆತ ಸಾಮಾನ್ಯ ಸಂಗತಿಯಾಗಿದ್ದು, ಹಲವೆಡೆ ಈ ರೀತಿಯ ದಾಳಿಗಳು ನಡೆದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+