ಮಕ್ಕಳ ಜೊತೆ ಮಹಿಳೆ ಸಾವು, ಕಾರಣ ನಿಗೂಢ?

Mother and two children found dead in sump in Bangalore
ಬೆಂಗಳೂರು, ಫೆ.13: ಮನೆ ಮಂದಿಯೆಲ್ಲಾ ಹಬ್ಬದ ಸಂಭ್ರಮಾಚರಣೆಗೆ ಅಣಿಯಾಗುತ್ತಿರುವ ಸಂದರ್ಭದಲ್ಲಿ ಹಬ್ಬದ ಮನೆಯಲ್ಲಿ ಸೂತಕದ ವಾತಾವರಣ ಆವರಿಸಿತು. ಶುಕ್ರವಾರ ತನ್ನ ಮಕ್ಕಳೊಂದಿಗೆ ಸಾವನ್ನಪ್ಪಿದ ಮಂಜುಳಾ ಅವರ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಕುಮಾರಸ್ವಾಮಿ ಲೇಔಟ್ ಠಾಣಾಧಿಕಾರಿ ಹೇಳಿದ್ದಾರೆ.

ಹಬ್ಬದ ಕಾರಣ ಒಂದು ದಿನ ಗ್ಯಾಪ್ ಬಿಟ್ಟು ಭಾನುವಾರ ವಿಚಾರಣೆಗೆ ಮುಂದಾದ ಪೊಲೀಸರಿಗೆ ಮಂಜುಳಾ ಜೀವನದಲ್ಲಿ ಸಾಕಷ್ಟು ನೊಂದಿದ್ದರು, ಜಿಗುಪ್ಸೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಮಂಜುಳಾರ ಪೋಷಕರ ಹೇಳಿಕೆ ಪ್ರಕಾರ ಇದು ಆಕಸ್ಮಿಕ ಸಾವು. ಆತ್ಮಹತ್ಯೆ ಮಾಡಿಕೊಳ್ಳುವ ಯಾವ ಉದ್ದೇಶವಾಗಲಿ, ತೊಂದರೆಯಾಗಲಿ ನಮ್ಮ ಮಗಳಿಗೆ ಇರಲಿಲ್ಲ ಎಂದಿದ್ದಾರೆ.

ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರ ಪ್ರಾಥಮಿಕ ವರದಿ ಪ್ರಕಾರ, ಹೊರಗಡೆ ಆಡಿಕೊಂಡಿದ್ದ 6 ವರ್ಷದ ಮಗಳು ಅನುಷಾಳನ್ನು ತಾಯಿ ಮಂಜುಳಾ ಕರೆಯುತ್ತಾಳೆ. ಆ ಸಮಯದಲ್ಲಿ ಒಂದೂವರೆ ವರ್ಷ ಮಗ ಜಗದೀಶ ಕೂಡಾ ತಾಯಿಯ ಬಳಿ ಇರುತ್ತಾನೆ.

ಪೋಷಕರ ಹೇಳಿಕೆ ಪ್ರಕಾರ ಮಕ್ಕಳಿಗೆ ಸ್ನಾನ ಮಾಡಿಸುವ ಆಕಸ್ಮಿಕವಾಗಿ ಸಂಪ್ ಗೆ ಬಿದ್ದು ಪ್ರಾಣ ಬಿಟ್ಟಿದ್ದಾರೆ. ಇನ್ನೊಂದು ಕೋನದಲ್ಲಿ ನೋಡಿದರೆ ಮಂಜುಳಾ ಮಕ್ಕಳನ್ನು ನೀರಿನ ತೊಟ್ಟಿಗೆ ಹಾಕಿ ತಾನು ಹಾರಿ ಪ್ರಾಣ ಬಿಟ್ಟಿದ್ದಾಳೆ. ಒಂದನೇ ಮಹಡಿಯಲ್ಲಿ ಪೋಷಕರು ವಾಸಿಸುತ್ತಿದ್ದಾರೆ. ಆರ್ಥಿಕವಾಗಿ ಸ್ಥಿತಿವಂತನಲ್ಲದಿದ್ದರೂ ಮಂಜುಳಾಳ ಪತಿ ಸನ್ನಡತೆಯುಳ್ಳವನಾಗಿದ್ದಾನೆ.

ಒಟ್ಟಿನಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ಯೋತ್ಸವನಗರದಲ್ಲಿ ನಡೆದ ಈ ಘಟನೆ ಮೂವರನ್ನು ಬಲಿ ತೆಗೆದುಕೊಂಡಿದೆ. ಆತ್ಮಹತ್ಯೆಯೋ, ಆಕಸ್ಮಿಕವೋ ಒಟ್ಟಿನಲ್ಲಿ ಪೊಲೀಸ್ ರೆಕಾರ್ಡ್ಸ್ ಪ್ರಕಾರ ಅಸಹಜ ಸಾವು ಎಂಬುದಂತೂ ನಿಜ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+