ಮದನಿಗೆ ಉಂಟು ರಾಜಕೀಯ ನಂಟು: ಆಚಾರ್ಯ

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಆಚಾರ್ಯ, ಮದನಿ ಜೊತೆ ಯಾವ ರಾಜಕೀಯ ಪಕ್ಷ ಅಥವಾ ಮುಖಂಡರು ಕೈ ಜೋಡಿಸಿದ್ದರೆ ಎಂಬ ವಿಷಯವನ್ನು ಬಿಟ್ಟುಕೊಡಲಿಲ್ಲ. ಅಬ್ದುಲ್ ಮದನಿ ತನಿಖೆ ಇನ್ನೂ ಜಾರಿಯಲ್ಲಿದ್ದು, ಆತ ಇನ್ನೂ 8 ರಿಂದ 10 ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಸಮಯದಲ್ಲಿ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.
ಸೆ.24ರಂದು ಬಾಬ್ರಿ ಮಸೀದಿ ರಾಮ ಜನ್ಮಭೂಮಿ ವಿವಾದದ ತೀರ್ಪು ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆಚಾರ್ಯ ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ಅವರ ಹಠಾತ್ ರಾಜೀನಾಮೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಗೃಹಸಚಿವ ವಿಎಸ್ ಆಚಾರ್ಯ ನಿರಾಕರಿಸಿದರು.











Click it and Unblock the Notifications