ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಕ್ರೋಸಾಫ್ಟ್ ನ ಎಲೋಪ್ ನೋಕಿಯಾ ಸಿಇಒ

By Mahesh
|
Google Oneindia Kannada News

Nokia says Microsoft's Elop to be new CEO
ಹೆಲ್ಸಿಂಕಿ, ಸೆ.10:ಪ್ರಮುಖ ಜಾಗತಿಕ ಮೊಬೈಲ್ ದೂರವಾಣಿ ತಯಾರಿಕಾ ಕಂಪೆನಿ ನೋಕಿಯಾ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ)ಯ ಶೋಧ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದ್ದು, ಮೈಕ್ರೋಸಾಫ್ಟ್ ನಲ್ಲಿರುವ ಸ್ಟೀಫನ್ ಎಲೋಪ್ ಅವರು ನೋಕಿಯಾದ ನೂತನ ಸಿಇಒ ಆಗಿರುತ್ತಾರೆ ಎಂದಿದೆ.

ಸದ್ಯದ ಸಿಇಒ ಒಲ್ಲಿ ಪೆಕ್ಕ ಕಲ್ಲಸೊವೊ ಅವರ ಸ್ಥಾನಕ್ಕೆ ಆಯ್ಕೆಯಾಗಿರುವ ಎಲೋಪ್ ಸೆ.21 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

2006ರಲ್ಲಿ ಕಲ್ಲಿಸೊವೊ ಅವರು ನೋಕಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸಕ್ಕೆ ಸೇರಿದ್ದರು. ಆದರೆ, ಆಪಲ್ ಹಾಗೂ ಗೂಗಲ್ ಮೊಬೈಲ್ ಫೋನ್ ಗಳಿಗೆ ಸ್ಪರ್ಧೆನೀಡಲು ಕಂಪೆನಿ ಹಲವು ಬಾರಿ ಸ್ಪರ್ಧಿಸಿ ವಿಫಲವಾಗಿತ್ತು.

ಸ್ಮಾರ್ಟ್ ಫೋನ್ ಮಾರುಕಟ್ಟೆಗೇನು ಲಾಭ: ಆಪಲ್ ನ ಐಫೋನ್ , ರಿಮ್ ನ ಬ್ಲಾಕ್ ಬೆರ್ರಿ, ಆಂಡ್ರೈಡ್ ಫೋನ್ ಗಳು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದರು ನೋಕಿಯಾ ತನ್ನ ಪ್ರಾಬಲ್ಯವನ್ನು ಮೆರೆಯುತ್ತಿದೆ.

ಸಿಂಬಿಯನ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಕಲ್ಲಾಸೊವೊ ಹೇಳಿರುವ ಮಾತಿಗೆ ನೋಕಿಯಾ ಎಷ್ಟು ಬದ್ಧವಾಗಿರುತ್ತದೆ ಅಲ್ಲದೆ, ಮೈಕ್ರೋಸಾಫ್ಟ್ ನ ವಾಣಿಜ್ಯ ವಿಭಾಗದಿಂದ ಬಂದು ಅಧಿಕಾರ ವಹಿಸಿಕೊಳ್ಳುತ್ತಿರುವ ಎಲೋಪ್, ವಿಂಡೋಸ್ ಫೋನ್ 7 ಅನ್ನು ನೋಕಿಯಾ ಮೂಲಕ ಪರಿಚಯಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X