ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳಾ ಉದ್ಯೋಗಿಯನ್ನು ರೇಪ್ ಮಾಡಿದ ಬಾಸ್!

By Mrutyunjaya Kalmat
|
Google Oneindia Kannada News

Crimebeat
ಬೆಂಗಳೂರು, ಸೆ. 8 : ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಕೂಗಳತೆ ದೂರದಲ್ಲಿ ಮಹಿಳೆಯೊಬ್ಬರ ಮೇಲೆ ಆಕೆಯ ಬಾಸ್ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.

ಕಳೆದ ಎರಡು ವರ್ಷದಿಂದ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಇನ್‌ಫೆಂಟ್ರಿ ರಸ್ತೆ ಎಂಬಸಿ ಸ್ಕ್ವೇರ್‌ನ ಸ್ಯಾಂಡ್‌ವುಡ್ ಕನ್ಸಲ್ಟಿಂಗ್ ಪ್ರೈ.ಲಿ.ನ ಉದ್ಯೋಗಿ ಎಂಸಿ ರೇಣುಕಾ (ಹೆಸರು ಬದಲಿಸಲಾಗಿದೆ) ಸೆ.5 ರಂದು ಕಬ್ಬನ್‌ಪಾರ್ಕ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ, ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಕಬ್ಬನ್ ಪಾರ್ಕ್ ಪೊಲೀಸರು ಇದೊಂದು ಪರ್ಸನಲ್ ಕೇಸ್. ಅಂಥದ್ದೇನೂ ನಡೆದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ !

ನಡೆದಿದ್ದೇನು ? ಕೆನರಾ ಬ್ಯಾಂಕ್ ಲೇಔಟ್ 9ನೇ ಮೇನ್ ನಿವಾಸಿ ನಿವಾಸಿ ರೇಣುಕಾ, ಅ. 2008ರಲ್ಲಿ ಸಂಸ್ಥೆಯ ಕಾನೂನು ವಿಭಾಗದಲ್ಲಿ ಮ್ಯಾನೇಜರ್ ಕೆಲಸಕ್ಕೆ ಸೇರಿದರು. ಆರಂಭದಲ್ಲಿ ಯಾವುದೇ ತೊಂದರೆ ಇರಲಿಲ್ಲ. ಕೆಲದಿನಗಳ ನಂತರ ಆಕೆಯ ಬಾಸ್ ಪ್ರತಾಪ್, ಅಶ್ಲೀಲ ಮಾತು ಆಡಲಾರಂಭಿಸಿದರು. ನೀನು ಸುಂದರವಾಗಿದ್ದೀ. ಗಂಡ ನಿನ್ನ ಜತೆ ಉತ್ತಮ ಲೈಂಗಿಕ ಸಂಬಂಧ ಹೊಂದಿದ್ದಾನಾ ಎಂದು ಪ್ರಶ್ನಿಸುತ್ತಿದ್ದ. ಆಕೆಯ ಮೊಬೈಲ್‌ಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ.

ಆರಂಭದಲ್ಲಿ ರೇಣುಕಾ ಇದನ್ನು ನಿರ್ಲಕ್ಷಿಸಿದರು. ಇದನ್ನು ದೌರ್ಬಲ್ಯ ಎಂದು ಪರಿಗಣಿಸಿದ ಆತ, ರೇಣುಕಾಗೆ ತಡವಾಗಿ ಮನೆಗೆ ಹೋಗಲು ಸೂಚಿಸುತ್ತಿದ್ದ. ಪ್ರತಿಭಟಿಸಿದರೆ ಕೆಲಸ ಕಳೆದುಕೊಳ್ಳಬಹುದೆಂಬ ಭಯದಿಂದ ಆಕೆ ಸುಮ್ಮನಿದ್ದರು. 2008 ಅ. 24ರಂದು ಬೆಳಗ್ಗೆ ಸಂಜೆ ಮೀಟಿಂಗ್ ಇದೆ ಎಂದು ಪ್ರತಾಪ್ ತಿಳಿಸಿದ್ದ. ಹೀಗಾಗಿ ರೇಣುಕಾ 6 ಗಂಟೆ ನಂತರವೂ ಕಾದು ಕುಳಿತಿದ್ದರು. ಎಲ್ಲರೂ ಹೋದ ಮೇಲೂ ಮೀಟಿಂಗ್ ಆರಂಭವಾಗದ್ದರಿಂದ ಅನುಮಾನಗೊಂಡು ಪ್ರಶ್ನಿಸಿದಾಗ, ನಮ್ಮಿಬ್ಬರಿಗೆ ಮಾತ್ರ ಮೀಟಿಂಗ್ ಎಂದ. ನಂತರ ಸಂಸ್ಥೆಯ ಮ್ಯಾನೇಜಿಂಗ್ ಪಾರ್ಟ್‌ನರ್ ಹರಿ ಅಯ್ಯರ್ ಎಂಬುವರ ಚೇಂಬರ್‌ಗೆ ಕರೆದೊಯ್ದು, ನೀರು ಸೋರಿಕೆಯಾಗುತ್ತಿದೆ ಪರೀಕ್ಷಿಸು ಎಂದು ಸೂಚಿಸಿದ.

ಬಳಿಕ ಕೊಠಡಿ ಬಾಗಿಲು ಹಾಕಿ, ಅತ್ಯಾಚಾರ ಎಸಗಿದ. ಕೊಠಡಿಗೆ ಸೌಂಡ್‌ಪ್ರೂಫ್ ವ್ಯವಸ್ಥೆ ಮಾಡಿದ್ದರಿಂದ,ಕೂಗಿಕೊಂಡರೂ ಪ್ರಯೋಜನವಾಗಲಿಲ್ಲ. ನಂತರ ನನ್ನ ಕಾಲಿಗೆ ಬಿದ್ದು ತಪ್ಪಾಯಿತು.ದಯವಿಟ್ಟು ಪೊಲೀಸ್ ಕಂಪ್ಲೇಂಟ್ ಕೊಡಬೇಡ ಎಂದು ತಿಳಿಸಿದ. ಪ್ರತಿಭಟಿಸಿದಾಗ,ನನಗೆ ರಾಜಕಾರಣಿಗಳ ಪರಿಚಯವಿದೆ.ಸಾಕಷ್ಟು
ಹಣವಿದೆ. ವಿಚಾರ ಬಹಿರಂಗಗೊಳಿಸಿದರೆ ಗಂಡನನ್ನು ಕೊಲ್ಲಿಸುವುದಾಗಿ ಬೆದರಿಸಿದ ಎಂದು ದೂರಿನಲ್ಲಿ ರೇಣುಕಾ ಆರೋಪಿಸಿದ್ದಾರೆ.

ಬ್ಲ್ಯಾಕ್‌ಮೇಲ್ : ನಂತರವೂ ಅತ್ಯಾಚಾರ ಎಸಗಿದ ಆತ, ನಗ್ನ ಚಿತ್ರ ತೆಗೆದು ಇಂಟರ್‌ನೆಟ್‌ನಲ್ಲಿ ಪ್ರಕಟಿಸುವ ಬೆದರಿಕೆ ಹಾಕಿದ್ದ. ಹೀಗಾಗಿ ಎರಡು ವರ್ಷ ಸುಮ್ಮನಿದ್ದೆ. ಗಂಡನ ಬಳಿ ವಿಷಯ ಮುಚ್ಚಿಡಲು ಆತ್ಮಸಾಕ್ಷಿ ಒಪ್ಪದೆ, ಬಹಿರಂಗಗೊಳಿಸಿದೆ. ಹೀಗಾಗಿ ದೂರು ನೀಡಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X