ಮೈಸೂರು : ದಸರಾ ಗಜಪಡೆಗೆ ಮಂಗಳಾರತಿ

ಮೈಸೂರು, ಸೆ. 7: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯ ಮೊದಲ ತಂಡವನ್ನು ಸಂಪ್ರದಾಯದ ರೀತಿಯಲ್ಲಿ ವಿಧಿವಿಧಾನಗಳ ಮೂಲಕ ಭವ್ಯವಾಗಿ ಅರಮನೆಗೆ ಸೋಮವಾರ ಸ್ವಾಗತಿಸಿಕೊಳ್ಳಲಾಯಿತು.

ಅರಮನೆಯ ಜಯಮಾರ್ತಾಂಡ ದ್ವಾರದ ಬಳಿಗೆ ಆಗಮಿಸಿದ ಅಂಬಾರಿ ಹೊರುವ ಬಲರಾಮ ಸೇರಿದಂತೆ ಆರು ಆನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಸುರೇಶ್ ‌ಕುಮಾರ್, ಪ್ರವಾಸೋದ್ಯಮ ಸಚಿವ ಜನಾದರ್ನ ರೆಡ್ಡಿ, ಮೇಯರ್ ಸಂದೇಶಸ್ವಾಮಿ ಗಜಪಡೆಯನ್ನು ಕಬ್ಬು, ಬೆಲ್ಲ ಮತ್ತು ಅಕ್ಕಿ ನೀಡಿ, ಮಂಗಳಾರತಿ ಎತ್ತಿ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿಕೊಂಡರು.

ಅಲಂಕೃತಗೊಂಡ ಬಲರಾಮ, ಅಭಿಮನ್ಯು, ವರಲಕ್ಷ್ಮಿ, ಗಜೇಂದ್ರ, ಅರ್ಜುನ ಮತ್ತು ಸರಳ ಆನೆಗಳು ಗಾಂಭೀರ್ಯದಿಂದ ಅರಮನೆ ಆವರಣವನ್ನು ಪ್ರವೇಶಿಸಿದವು. ಪೊಲೀಸರಿಂದ ಗೌರವ ಸ್ವಾಗತ ಪಡೆದ ಗಜತಂಡ ಜಯ ಮಾರ್ತಾಂಡ ದ್ವಾರದಿಂದ ಮಂಗಳವಾದ್ಯ, ಅರಮನೆ ಬ್ಯಾಂಡ್ ಮತ್ತು ಮಂತ್ರಘೋಷಣೆ ಮಧ್ಯೆ ಹೆಜ್ಜೆ ಇಟ್ಟು ಅರಮನೆ ತಲುಪಿದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+