ನಕ್ಸಲರಿಗೆ ಎಡಪಕ್ಷಗಳ ಬೆಂಬಲವಿಲ್ಲ: ಯೆಚೂರಿ
ಸೇಲಂ
,ಸೆ. 6: ಮಾವೋವಾದಿಗಳಿಗೆ ಎಡಪಕ್ಷಗಳ ಸಂಪೂರ್ಣ ಸಹಕಾರವಿದೆ ಎಂಬ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಹೇಳಿಕೆಯನ್ನು ಸಿಪಿಎಂ ಪಾಲಿಟರ್ ಬ್ಯೂರೋ ಸದಸ್ಯ ಸೀತಾರಾಂ ಯೆಚೂರಿ ಸಾರ್ವಜನಿಕವಾಗಿ ಅಲ್ಲಗೆಳೆದು, ಎಡಪಕ್ಷಗಳು ಮಾವೋವಾದಿಗಳಿಗೆ ಎಂದಿಗೂ ಬೆಂಬಲ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. id="toptextpromo">ಸೇಲಂನಲ್ಲಿ
ನಡೆದ ಪಕ್ಷದ ಬಹಿರಂಗ ಮೆರವಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಎಡಪಕ್ಷಗಳ ಆಡಳಿತವಿರುವ ಎಲ್ಲ ರಾಜ್ಯಗಳಲ್ಲೂ ನಕ್ಸಲಿಸಂನ್ನು ನಿಷೇಧಿ ಸಲಾಗಿದೆ. ಕರುಣಾನಿಧಿಯಂತಹ ಅನುಭವಿ ರಾಜಕಾರಣಿಯಾದವರು, ಇಂತಹ ಅಸತ್ಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಹುಶ:
ಕರುಣಾನಿಧಿಯವರಿಗೆ ಯಾರೋ ತಪ್ಪು ಮಾಹಿತಿ ನೀಡಿರಬೇಕೆಂದು ವ್ಯಂಗ್ಯವಾಡಿದ ಅವರು, ಹಿಂಸೆ ಮಾರ್ಗದಲ್ಲಿ ಹೋಗುವ ನಕ್ಸಲರನ್ನು ಎಂದಿಗೂ ನಾವು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದರು. ಭಾರತದ ಮಾವೋವಾದಿಗಳಿಗೆ ರಾಷ್ಟ್ರದ ಸಂಸದೀಯ ಪ್ರಜಾಪ್ರಭುತ್ವದ ಮೇಲೆ ಎಳ್ಳಷ್ಟು ನಂಬಿಕೆಯಿಲ್ಲ. ಆದರೆ ಎಡಪಕ್ಷಗಳಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹಾಗೂ ಗೌರವವಿದೆ ಎಂದು ಯೆಚೂರಿ ಸ್ಪಷ್ಟಪಡಿಸಿದರು.











Click it and Unblock the Notifications