ನಾನು ಕುರಿ, ನನ್ನ ಮಗ ಕುರಿ ಮರಿ : ರಾಮಚಂದ್ರ ಗೌಡ

ಹಾಸನ ವೈದ್ಯಕೀಯ ಕಾಲೇಜು ನೇಮಕಾತಿ ಅವ್ಯವಹಾರದಲ್ಲಿ ವೈದ್ಯಕೀಯ ಸಚಿವ ರಾಮಚಂದ್ರಗೌಡ ಮತ್ತು ಅವರ ಪುತ್ರ ಸಪ್ತಗಿರಿಗೌಡ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಸಚಿವ ರಾಮಚಂದ್ರಗೌಡ ಪ್ರತಿಕ್ರಿಯಿಸಿದ ಪರಿ ಇದು. ಲಂಚ ಪ್ರಕರಣದ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡು, ರೇವಣ್ಣ ಮತ್ತಿತರರು ತೋಳಗಳಂತೆ ನಮ್ಮ ಮೇಲೆ ವಿನಾ ಕಾರಣ ಮುಗಿಬೀಳುತ್ತಿದ್ದಾರೆ ಎಂದು ಆರೋಪಿಸಿದರು.
ಅವ್ಯವಹಾರ ನ್ಯಾಯಾಲಯದ ಆವರಣದಲ್ಲಿರುವುದರಿಂದ ಇದರ ಕುರಿತು ಏನನ್ನು ಹೇಳಲು ಬಯಸುವುದಿಲ್ಲ. ಒಂದಂತೂ ಸ್ಪಷ್ಟ ನೇಮಕಾತಿಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ ಎಂದು ಪುನರುಚ್ಚರಿಸಿದರು. ಈ ಅವ್ಯವಹಾರ ಆರೋಪದ ಕುರಿತು ಮುಖ್ಯಮಂತ್ರಿ ನೇಮಕ ಮಾಡಿರುವ ತನಿಖಾಧಿಕಾರಿಗಳಿಗೆ ತಮ್ಮ ಇಲಾಖೆಯ ಅಧಿಕಾರಿಗಳು ಎಲ್ಲ ರೀತಿಯಿಂದಲೂ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ನೇಮಕಾತಿಯಲ್ಲಿ ಕೇಳಿ ಬರುತ್ತಿರುವ ಆರೋಪಗಳು ನಿರಾಧಾರ ಎಂದು ಹೇಳಿದರು.
ಹಾಸನದ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ನೇಮಕಾತಿ ಸಂದರ್ಭದಲ್ಲಿ ನಡೆದಿರುವ ಅವ್ಯವಹಾರದ ಕುರಿತು ಜೆಡಿಎಸ್ ಮುಖಂಡ ರೇವಣ್ಣ, ವೈದ್ಯಕೀಯ ಸಚಿವ ರಾಮಚಂದ್ರಗೌಡರ ಮತ್ತು ಅವರ ಪುತ್ರ ಸಪ್ತಗಿರಿಗೌಡ ವಿರುದ್ಧ ಬಾಂಬ್ ಒಂದನ್ನು ಸಿಡಿಸಿದ್ದರು.











Click it and Unblock the Notifications