ಜಿ ವೆಂಕಟಸುಬ್ಬಯ್ಯಗೆ ವಿಕೃ ಗೋಕಾಕ್ ಪ್ರಶಸ್ತಿ

ಭಾರತೀಯ ವಿದ್ಯಾ ಭವನ ಹಾಗೂ ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಸಹಯೋಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಗೋಕಾಕ್ ದತ್ತಿ ಉಪನ್ಯಾಸ ಶಿಕ್ಷಕರ ದಿನವಾದ ಸೆಪ್ಟೆಂಬರ್ 5 ಭಾನುವಾರ ಬೆಳಗ್ಗೆ 10-30ಕ್ಕೆ ನೆರವೇರುವುದು.
ಈ ಸಂದರ್ಭದಲ್ಲಿ ಡಾ.ಶೈಲಜಾ ಕೊಪ್ಪರ್ ಅವರು ಭಾರತ ಸಿಂಧು ರಶ್ಮಿ ಕೃತಿ ಕುರಿತು ಸಿದ್ಧಪಡಿಸಿರುವ ಪಿಎಚ್.ಡಿ ಮಹಾ ಪ್ರಬಂಧ ಪುಸ್ತಕದ ಲೋಕಾರ್ಪಣೆಯನ್ನು ಡಾ.ಕಮಲಾ ಹಂಪ ನಾಗರಾಜಯ್ಯ ನೆರವೇರಿಸಲಿದ್ದಾರೆ. ಡಾ. ಹಂಪ ನಾಗರಾಜಯ್ಯ ಅವರು ಗೋಕಾಕ್ ವ್ಯಕ್ತಿತ್ವ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸ್ಥಳ : ಖಿಂಚಾ ಸಭಾಂಗಣ, ಭಾರತೀಯ ವಿದ್ಯಾ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು.
ದಿನಾಂಕ : ಸೆಪ್ಟೆಂಬರ್ 5, ಭಾನುನಾರ
ಸಮಯ : ಬೆಳಿಗ್ಗೆ 10.30ಕ್ಕೆ












Click it and Unblock the Notifications