ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಲ್ಲರ್ ಬಿಎಂಟಿಸಿಗೆ ವಿದ್ಯಾರ್ಥಿನಿ ಬಲಿ

By Mahesh
|
Google Oneindia Kannada News

Killer BMTC
ಬೆಂಗಳೂರು,ಸೆ.2: ಕಿಲ್ಲರ್ ಬಿಎಂಟಿಸಿ ವಾಹನಕ್ಕೆ ವಿದ್ಯಾರ್ಥಿನಿಯೊಬ್ಬಳು ಬಲಿಯಾದ ಘಟನೆ ಬುಧವಾರ ವಿಜಯನಗರದಲ್ಲಿ ನಡೆದಿದೆ. ಭಾರತಿ ಸಂಸ್ಕೃತಿ ವಿದ್ಯಾಪೀಠ ಕಾಲೇಜ್‌ನಲ್ಲಿ ಬಿಬಿಎಂ ಮೊದಲೇ ವರ್ಷದಲ್ಲಿ ಅಭ್ಯಸಿಸುತ್ತಿದ್ದ ಸೌಮ್ಯ(20) ಬಿಎಂಟಿಸಿ ಬಸ್‌ಗೆ ಬಲಿಯಾದ ದುರ್ದೈವಿ.

ರಾಜಭವನ ಪೊಲೀಸ್ ಅಧಿಕಾರಿಯಾಗಿರುವ ಮೂಡಲಪಾಳ್ಯದ ನಿವಾಸಿ ಬಸವರಾಜ್ ಎಂಬವರ ಪುತ್ರಿ ಸೌಮ್ಯ ಎಂದಿನಂತೆ ಬೆಳಿಗ್ಗೆ ಕಾಲೇಜಿಗೆಂದು ಮೂಡಲಪಾಳ್ಯದಿಂದ ವಿಜಯನಗರಕ್ಕೆ ಬಿಎಂಟಿಸಿ ಬಸ್‌ಗೆ ಕಾದಿದ್ದಾಳೆ.ವಿಜಯನಗರ ಬಸ್ ನಿಲ್ದಾಣದಲ್ಲಿ ಇಳಿದು ಮನುವನ ಬಳಿ ರಸ್ತೆ ದಾಟುತ್ತಿದ್ದಾಗ ಬಿಎಂಟಿಸಿ ಬಸ್ ರೂಟ್ 176 ಹಂಪಿನಗರದಿಂದ ಕಾವಲ್ ಬೈರಸಂದ್ರಕ್ಕೆ ಹೋಗುವ ಬಸ್ ಸೌಮ್ಯಳ ಮೇಲೆ ಹರಿದಿದೆ.

ತಕ್ಷಣ ಆಕೆಯನ್ನು ಸಮೀಪದ ಗಾಯತ್ರಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ವಿಜಯನಗರ ಸಂಚಾರಿ ಠಾಣೆ ಪೊಲೀಸ ಠಾಣೆಯಲ್ಲಿ ಚಾಲಕನ ನಿರ್ಲಕ್ಷ್ಯ ಚಾಲನೆ ಅಪಘಾತಕ್ಕೆ ಕಾರಣವೆಂದು ಮೃತಳ ಸಂಬಂಧಿಕರು ದೂರು ನೀಡಿದ್ದಾರೆ.

ಮೆಟ್ರೋ ಕಾಮಗಾರಿ ಕಾರಣ?: ವಿಜಯನಗರದಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯಿಂದ ಸುತ್ತಮುತ್ತ ದಿನನಿತ್ಯ ಸಂಚಾರ ದಟ್ಟಣೆ ಇರುತ್ತದೆ. ವಿಜಯನಗರ ಬಸ್ ನಿಲ್ದಾಣ ಬಳಿ ಬನಶಂಕರಿ, ಸಿಲ್ಕ್ ಬೋರ್ಡ್ ಕಡೆ ಹೋಗುವ ಬಸ್‌ಗಳು ಬಲತಿರುವು ಪಡೆದುಕೊಳ್ಳುತ್ತವೆ. ಈ ಸಂದರ್ಭದಲ್ಲಿ ಮಾರುತಿ ಮಂದಿರದಿಂದ ಬರುವ ವಾಹನಗಳಿಗೆ ರಸ್ತೆ ದಾಟುವವರು ಕಾಣುವದಿಲ್ಲ.ಹೀಗಾಗಿಯೇ ಸೌಮ್ಯ ಬಿಎಂಟಿಸಿ ವಾಹನದ ಚಕ್ರಕ್ಕೆ ಸಿಲುಕಿಕೊಂಡಿದ್ದಾಳೆ.

ವಿಜಯನಗದ ಬಸ್ ನಿಲ್ದಾಣದ ಬಳಿ ಪಾದಚಾರಿಗಳಿಗಾಗಿ ಸುರಂಗ ಮಾರ್ಗವನ್ನು ಬಿಬಿಎಂಪಿ ನಿರ್ಮಿಸಿದೆ.ಆದರೆ ಸಾರ್ವಜನಿಕರು ಸುರಂಗ ಮಾರ್ಗವನ್ನು ಹೆಚ್ಚಾಗಿ ಬಳಸುತ್ತಿಲ್ಲ.ಸೌಮ್ಯ ಪಾದಚಾರಿ ಸುರಂಗಮಾರ್ಗ ಬಳಸಿದ್ದರೇ,ತನ್ನ ಸಾವು ತಪ್ಪಿಸಿಕೊಳ್ಳಬಹುದಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X