ಪಿಎಂ ಕಸ ಗುಡಿಸಿದರೂ ಕ್ರೀಡಾಂಗಣ ಸಿದ್ಧವಾಗದು
ಅಹಮದಾಬಾದ್,
ಸೆ. 1 : ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರೇ ಖುದ್ದು ಸಾರಿಸಿ ಗುಡಿಸಿದರೂ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಕ್ರೀಡಾಂಗಣಗಳು ಸೂಕ್ತ ಸಮಯಕ್ಕೆ ಸಿದ್ಧವಾಗುವುದು ಅಸಾಧ್ಯ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ. id="toptextpromo">ಮುಂದಿನ
ಅಕ್ಟೋಬರ್ ನಲ್ಲಿ ಆರಂಭವಾಗಬೇಕಾಗಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ಆಯೋಜನೆಗೆ ಸಂಬಂಧಿಸಿದಂತೆ ನಿಧಾನಗತಿಯಲ್ಲಿ ಸಿದ್ದತಾ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರಕಾರದ ಕಾರ್ಯಕ್ಷಮತೆಯನ್ನು ಪ್ರಶ್ನಿಸಿರುವ ಮೋದಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಮನ್ ವೆಲ್ತ್ ಕ್ರೀಡಾಕೂಟ ಹೇಗೆ ನಡೆಯುತ್ತದೋ ಏನೂ ತಿಳಿಯದು. ಕ್ರೀಡಾಂಗಣಗಳನ್ನು ಸಿದ್ಧಪಡಿಸಲು ಐದಾರು ವರ್ಷಗಳ ಕಾಲಾವಕಾಶವಿತ್ತು. ಆದರೂ ಈ ಪ್ರಮಾಣದ ಗೊಂದಲ ಸೃಷ್ಟಿಸಿಕೊಂಡಿರುವುದು ಏಕೆ ಎಂದು ಅವರು ಪ್ರಶ್ನಿಸಿದರು. id='are-slot-1' class='oiad oi-axt oiadv'> id='top-searched-articles'>ಗುಜರಾತ್
ಮೇಲೆ ಸಿಬಿಐ ಎಂಬ ಅಸ್ತ್ರವನ್ನು ಉಪಯೋಗಿಸಿ ಆಡಳಿತ ಯಂತ್ರ ದುರುಪಯೋಗಪಡಿಸಿಕೊಳ್ಳುತ್ತಿರುವ ಕೇಂದ್ರದ ಕ್ರಮಗಳನ್ನು ಖಂಡಿಸಿದ ಮೋದಿ, ಪ್ರತಿ ಬಾರಿ ಸಿಬಿಐ ತಮ್ಮನ್ನು ರಕ್ಷಿಸುತ್ತದೆ ಎಂದು ಕೇಂದ್ರ ಭಾವಿಸಿದಂತಿದೆ. ಆದರೆ, ಕಾಮನ್ ವೆಲ್ತ್ ಕ್ರೀಡಾಕೂಟ ಆಯೋಜನೆಯ ವೈಫಲ್ಯವನ್ನು ಸಿಬಿಐನಿಂದಲೂ ರಕ್ಷಿಸಲು ಸಾಧ್ಯವಿಲ್ಲ ಎಂದು ಟೀಕಿಸಿದರು.











Click it and Unblock the Notifications