ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಂಡುಪಾಳ್ಯ ಗ್ಯಾಂಗ್‌ಗೆ ಜೀವಾವಧಿ ಶಿಕ್ಷೆ ಖಾಯಂ

By Mahesh
|
Google Oneindia Kannada News

Karnataka HC upholds life term for Dandupalya killers
ಬೆಂಗಳೂರು,ಸೆ.1: ಕೊಲೆ ಆರೋಪದ ಹಿನ್ನೆಲೆಯಲ್ಲಿ ದಂಡುಪಾಳ್ಯದ ನಾಲ್ಕು ಮಂದಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ರಾಮಕೃಷ್ಣ ಎಂಬುವರನ್ನು ಕೊಲೆ ಮಾಡಿದ್ದ ಪ್ರಕರಣದ ವಿಚಾರಣೆ ನಡೆಸಿದ ಅಧೀನ ನ್ಯಾಯಾಲಯ ವೆಂಕಟೇಶ, ನಲ್ಲ ತಿಮ್ಮ, ಲಕ್ಷ್ಮೀ ಸೇರಿದಂತೆ ನಾಲ್ಕು ಮಂದಿಗೆ 2003ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟಿನಲ್ಲಿ ಅವರು ಮೇಲ್ಮನವಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಜಿ ಸಭಾಹಿತ್ ಮತ್ತು ನ್ಯಾಯಮೂರ್ತಿ ಸತ್ಯ ನಾರಾಯಣ ಅವರನ್ನೊಳಗೊಂಡ ವಿಭಾಗೀಯ ಪೀಠ ಮೇಲ್ಮನವಿ ತಿರಸ್ಕರಿಸಿ ಅಧೀನ ನ್ಯಾಯಾಲಯ(ಸಿಟಿ ಸೆಷನ್ಸ್ ಕೋರ್ಟ್) ನೀಡಿದ್ದ ಆದೇಶವನ್ನು ಎತ್ತಿಹಿಡಿಯಿತು.

ಭಯಾನಕ ಗ್ಯಾಂಗ್ :
ಮುನಿಕೃಷ್ಣ ಅಲಿಯಾಸ್ ಕೃಷ್ಣ, ನಲ್ಲತಿಮ್ಮ, ಲಕ್ಷ್ಮಿ ಹಾಗೂ ವೆಂಕಟೇಶ್ ಅಲಿಯಾಸ್ ಚಂದ್ರ ಎಂಬುವರ ಗ್ಯಾಂಗ್ಮ್ 72 ವರ್ಷದ ರಾಮಕೃಷ್ಣಯ್ಯ ಎಂಬ ಹಲಸೂರಿನ ನಿವಾಸಿಯ ಕತ್ತು ಕೊಯ್ದು ಕೊಲೆಗೈದಿದ್ದರು. ಆಮೇಲೆ ಅವರ ಮನೆಯನ್ನು ದೋಚಿದ್ದರು. 1991 ರಿಂದ 2001ರ ಅವಧಿಯಲ್ಲಿ ಕಳ್ಳತನ, ದರೋಡೆ, ಕೊಲೆ ಮುಂತಾದ ದುಷ್ಕೃತ್ಯದಲ್ಲಿ ಈ ಗ್ಯಾಂಗ್ ಭಾಗಿಯಾಗಿತ್ತು.

ಒಂಟಿ ಮಹಿಳೆಯರು ಇರುವ ಮನೆಗಳನ್ನು ಗುರಿಯಾಗಿರಿಸಿಕೊಂಡು ದುಷ್ಕೃತ್ಯ ಎಸೆಗುತ್ತಿದ್ದರು.ಸುಮಾರು 100 ಜನರಿದ್ದ ಗ್ಯಾಂಗ್ ನಲ್ಲಿ ಮಹಿಳೆಯರು, ಮಕ್ಕಳು ಸಹ ಸೇರಿದ್ದರು. ಹೊಸಕೋಟೆಯಿಂದ ಬೆಂಗಳೂರಿಗೆ ಬರುವ ಹಾದಿಯಲ್ಲಿ ಎಡಬದಿಯಲ್ಲಿ ಕಾಣಸಿಗುವ ದಂಡುಪಾಳ್ಯದ ಮೂಲದವರಾದ ಇವರು ದಂಡುಪಾಳ್ಯ ಗ್ಯಾಂಗ್ ಎಂದೇ ಕುಖ್ಯಾತಿ ಗಳಿಸಿದ್ದರು.ಕನಿಷ್ಠ 75 ಜನರ ಕೊರಳನ್ನು ಕೊಯ್ದು ಅಷ್ಟೇ ಸಂಖ್ಯೆಯ ಮನೆಗಳನ್ನು ಲೂಟಿ ಮಾಡಿದ ದಾಖಲೆಯನ್ನು ಈ ಗ್ಯಾಂಗ್ ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X