ಬಿಬಿಎಂಪಿ ಬಜೆಟ್ ನಲ್ಲಿ ಏನೇನಿದೆ?

ಸುಮಾರು 8,488 ಕೋಟಿ ರುಗಳ ಬಜೆಟ್ ನಲ್ಲಿ ಆಡಳಿತಕ್ಕೆ ಶೇ.2, ಆರೋಗ್ಯಕ್ಕೆ 4, ಶಿಕ್ಷಣ-ಸಂಸ್ಕೃತಿ-ಕ್ರೀಡೆಗೆ ಶೇ.1, ಸಾಲ ಮರುಪಾವತಿಗೆ ಶೇ.7 ಹಾಗೂ ನಿರ್ವಹಣೆಗೆ ಶೇ6 ರಷ್ಟು ಅನುದಾನ ಮೀಸಲಿಟ್ಟುಎಲ್ಲಾ ವಲಯಗಳಲ್ಲಿ ಸಮಸ್ಥಿತಿ ಕಾಯ್ದುಕೊಂಡ ಬಜೆಟ್ ಎನಿಸಿದೆ.
ಹತ್ತು ಹಲವು ಹೊಸ ಕಾರ್ಯಕ್ರಮ, ಯೋಜನೆಗಳ ಘೋಷಣೆಗಳೊಂದಿಗೆ ಬಿಬಿಎಂಪಿ ಬಜೆಟ್ ಜನಮೆಚ್ಚುಗೆ ಬಜೆಟ್ ಎನ್ನಿಸುವ ಎಲ್ಲಾ ಸಾಧ್ಯತೆಗಳಿವೆ. ಬಜೆಟ್ ನ ಪ್ರಮುಖಾಂಶಗಳು ಇಂತಿದೆ:
ಆರೋಗ್ಯ:
* ಹೆಚ್ 1 ಎನ್ 1 ಸೇರಿದಂತೆ ಎಲ್ಲಾ ಬಗೆಯ ಸಾಂಕ್ರಾಮಿಕ ರೋಗಗಳ ತಡೆ,ನಿಯಂತ್ರಣಕ್ಕೆ ನಾಲ್ಕು ಕೋಟಿ
* ಸೊಳ್ಳೆ ನಿಯಂತ್ರಣ ಔಷಧಿ ಸಿಂಪಡಣೆ, ಆರೋಗ್ಯ ಜಾಗೃತಿ ಲಿಂಕ್ ಆಫೀಸರ್ ನೇಮಕ
* ಗರ್ಭಿಣಿಯರಿಗೆ ಉಚಿತ ಸ್ಕ್ಯಾನಿಂಗ್ ಸೌಲಭ್ಯ (ಖಾಸಗಿ ಸಹಭಾಗಿತ್ವದಲ್ಲಿ )
* ಬಿಬಿಎಂಪಿ ವ್ಯಾಪ್ತಿಗೆ ಸೇರಿದ ತಾಯಿ-ಮಡಿಲು ಉಚಿತ್ ಕಿಟ್ ಯೋಜನೆ
*ಹೊಸಕೆರೆಹಳ್ಳಿ ಆಸ್ಪತ್ರೆ ಆಧುನೀಕರಣಕ್ಕೆ 2 ಕೋಟಿ ರು.
ನಾಗರೀಕ ಸೌಲಭ್ಯ ಯೋಜನೆಗಳು
* ಬೀದಿ ನಾಯಿಗಳ ನಿರ್ಮೂಲನೆಗಾಗಿ 19 ಪ್ಯಾಕೆಜ್ ನಡಿ 5 ಕೋಟಿ ವೆಚ್ಚ.
* ರೇಬೀಸ್ ರೋಗ ತಡೆಗೆ 4 ಕೋಟಿ ರು.
* ಬೀದಿ ದೀಪಗಳ ಅಳವಡಿಕೆಗೆ 30 ಕೋಟೀ ರು. ಎಲ್ ಇಡಿ ದೀಪಗಳ ಅಳವಡಿಕೆಗೆ 2 ಕೋಟಿ ರು.
* ಪ್ರತಿ ಕಂಪೆನಿಗಳು ಇ ತ್ಯಾಜ್ಯ ನಿರ್ವಹಣೆ ಘಟಕ ಹೊಂದುವುದು ಕಡ್ಡಾಯ.
* ಏಳು ವಿವಿಧ ಹಂತದ ಪಾರ್ಕಿಂಗ್ ವ್ಯವಸ್ಥೆ ಕಟ್ಟಡಗಳು.
ಕ್ರೀಡೆ- ಸಂಸ್ಕೃತಿ
* ಕಬಡ್ಡಿ, ವಾಲಿಬಾಲ್ ಕ್ರೀಡೆ ಪ್ರೋತ್ಸಾಹಕ್ಕಾಗಿ ಮೇಯರ್ ಕಪ್ ಕ್ರೀಡಾಕೂಟ ಆಯೋಜನೆ
*ಕಲೆ, ಇತಿಹಾಸ ಮತ್ತು ಸಂಸ್ಕೃತಿ ರಕ್ಷಣೆಗಾಗಿ ಪಾರಂಪರಿಕ ತಾಣ ರಕ್ಷಣಾ ಕೋಶ ಅಸ್ತಿತ್ವಕ್ಕೆ ತರಲು ನಿರ್ಧಾರ.
* ಬಸವನಗುಡಿ ಈಜುಕೊಳ ಅಂತಾರಾಷ್ಟ್ರೀಯ ಮಾದರಿಯಲ್ಲಿ ಅಭಿವೃದ್ಧಿಪಡಿಸಲು 100 ಕೋಟಿ ರು.
* ನಗರದ ವಿವಿಧೆಡೆ ಮೂರು ಅತ್ಯಾಧುನಿಕ ಈಜುಕೊಳ ನಿರ್ಮಾಣಕ್ಕೆ 8.50 ಕೋಟಿ ರು.
* ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಡಾ.ರಾಜ್ ಕುಮಾರ್ ಪ್ರತಿಮೆ ಅನಾವರಣಕ್ಕೆ 25 ಲಕ್ಷ ರು.
ಶಿಕ್ಷಣ:
* ನಗರದ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಭವನ ನಿರ್ಮಾಣಕ್ಕೆ 1.5 ಕೋಟಿ ರು.
* ಬಿಬಿಎಂಪಿ ವ್ಯಾಪ್ತಿಯ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸ್ವೆಟ್ಟರ್.
* ವಿದ್ಯಾರ್ಥಿಗಳ ಬೌದ್ಧಿಕ ಜ್ಞಾನ ಅಭಿವೃದ್ಧಿಗೆ ಒತ್ತು. ಖಾಸಗಿ ಸಹಭಾಗಿತ್ವದಲ್ಲಿ ವಿಶೇಷ ಯೋಜನೆ.
ಹಿಂದುಳಿದ ವರ್ಗಗಳ ಕಲ್ಯಾಣ: ಎಸ್ಸಿ/ಎಸ್ಟಿ ವರ್ಗಗಳ ಕಲ್ಯಾಣಕ್ಕೆ 162 ಕೋಟಿ ರು ಅನುದಾನ ಉಳಿಸಿಕೊಳ್ಳಲಾಗಿದ್ದು, ಹೆಚ್ಚುವರಿಯಾಗಿ ಸಾಲ ಆಧಾರಿತ ಸಹಾಯ ಧನ, ಸ್ವಯಂ ಉದ್ಯೋಗ ಉಪಕರಣ ಕಿಟ್ ಮತ್ತು ಶಿಶುಪಾಲನ ಕೇಂದ್ರ ಸ್ಥಾಪನೆ.
* ಪಂಡಿತ್ ದೀನ್ ದಯಾಳ್ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯಡಿಯಲ್ಲಿ ವಿಮೆ ಯೋಜನೆಗಾಗಿ 20.88 ಕೋಟಿ ರು ಮೀಸಲು.
* ವಿಕಲಚೇತನರ ನಿಧಿಗೆ 10 ಕೋಟಿ ರು.
* ಮಹಿಳಾ ಕಲ್ಯಾಣ ಯೋಜನೆಯಡಿಯಲ್ಲಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಣೆಗೆ 20 ಕೋಟಿ ರು
* ಆರ್ಥಿಕವಾಗಿ ಹಿಂದುಳಿದ ಪೇಪರ್ ಹಾಗೂ ಹಾಲು ಮಾರುವವರಿಗೆ 7 ಕೋಟಿ ರು ವೆಚ್ಚದಲ್ಲಿ ಪ್ರತಿ ವಾರ್ಡ್ ಗೆ 100 ರಂತೆ 20 ಸಾವಿರ ಸೈಕಲ್ ವಿತರಣೆ.
ಇನ್ನಿತರ ಯೋಜನೆಗಳು:
* ನೌಕರರ ಹಾಜರಾತಿಯಲ್ಲಿ ಶಿಸ್ತು ರೂಪಿಸಲು ಬಯೋಮೆಟ್ರಿಕ್ ವ್ಯವಸ್ಥೆ.
* ಸ್ವಯಂ ಚಾಲಿತ ನಕ್ಷೆ ಮಂಜೂರಾತಿ ವಿಧಾನ ಅಳವಡಿಕೆ
* ಅಕ್ರಮ ಸಕ್ರಮ ಯೋಜನೆಯಿಂದ 750 ಕೋಟಿ ರು ಸಂಗ್ರಹದ ಗುರಿ.











Click it and Unblock the Notifications