ಸೆಪ್ಟೆಂಬರ್ ಅಂತ್ಯಕ್ಕೆ ಗುಲ್ಬರ್ಗಾದಲ್ಲಿ ಅಧಿವೇಶನ
ಬೆಂಗಳೂರು,
ಆ. 29 : ಕಡೂರು ಮತ್ತು ಗುಲ್ಬರ್ಗಾ ವಿಧಾನಸಭಾ ಮತಕ್ಷೇತ್ರಗಳ ಉಪಚುನಾವಣೆ ಮುಗಿದ ನಂತರ ಸೆಪ್ಟೆಂಬರ್ ಅಂತ್ಯದಲ್ಲಿ ಗುಲ್ಬರ್ಗಾದಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಅತಿವೃಷ್ಟಿ ಹಾನಿ ಕುರಿತು ಶೀಘ್ರವೇ ಜಿಲ್ಲಾದಿಕಾರಿಗಳಿಂದ ವರದಿ ಪಡೆದು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ಆದಿ ಬಣಜಿಗರ 2ಎಗೆ ಸೇರ್ಪಡೆ ಕುರಿತು ತಾವು ನೀಡಿದ ಹೇಳಿಕೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಲ್ಲ ಎಂದು ವಿವರಿಸಿದರು. id='are-slot-1' class='oiad oi-axt oiadv'> id='top-searched-articles'>ಸಾವಯುವ
ಕೃಷಿಯನ್ನು ಪ್ರೋತ್ಸಾಹಿಸಲು ಮುಂಬರುವ ಬಜೆಟ್ ನಲ್ಲಿ 200 ಕೋಟಿ ರುಪಾಯಿಗಳನ್ನು ತೆಗೆದಿರಿಸಲಾಗುತ್ತದೆ. ರಾಜ್ಯದಿಂದ ಪ್ರತಿವರ್ಷ ಸಾವಯುವ ಕೃಷಿ ಅಧ್ಯಯನಕ್ಕೆ 500 ರೈತರನ್ನು ವಿದೇಶಕ್ಕೆ ಕಳುಹಿಸಲಾಗಿತ್ತು. 2010-11ನೇ ಸಾಲಿನಿಂದ 1000 ರೈತ ಮಹಿಳೆಯನ್ನು ಸರಕಾರದ ವೆಚ್ಚದಲ್ಲಿಯೇ ವಿದೇಶಕ್ಕೆ ಕಳುಹಿಸಿ ಸಾವಯುವ ಕೃಷಿ ಬಗ್ಗೆ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.











Click it and Unblock the Notifications