ಕಾರ್ಲಟನ್ ದುರಂತ; ಮಡಿದವರಿಗೆ ಸಂಗೀತ ಶ್ರದ್ಧಾಂಜಲಿ
ಬೆಂಗಳೂರು,
ಆ.28: ಆರು ತಿಂಗಳ ಹಿಂದೆ ನಡೆದ ಕಾರ್ಲಟನ್ ಟವರ್ ಬೆಂಕಿ ದುರಂತದಲ್ಲಿ ಮಡಿದ ಒಂಭತ್ತು ಮಂದಿಗೆ ಸಂಗೀತದ ಮೂಲಕ ಶ್ರದ್ಧಾಂಜಲಿ ಸಲ್ಲಿಸುವ ವಿಭಿನ್ನ ಕಾರ್ಯಕ್ರಮ ಇಂದು ನಡೆಯಲಿದೆ. ವೈಟ್ ಫೀಲ್ಡ್ ನಲ್ಲಿರುವ ಫೋರಂ ವ್ಯಾಲು ಮಾಲ್ ನಲ್ಲಿ ಆಗಸ್ಟ್ 28ರ ಸಂಜೆ 3.30ಕ್ಕೆ ಸರಿಯಾಗಿ ಶ್ರದ್ಧಾಂಜಲಿ ಕಾರ್ಯಕ್ರಮ ಚಾಲನೆ ಪಡೆದುಕೊಳ್ಳಲಿದೆ. id="toptextpromo">ಬಿಯಾಂಡ್
ಕಾರ್ಲಟನ್ಎಂಬ ಸೇವಾ ಸಂಸ್ಥೆ ಈ ವಿಭಿನ್ನ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಿದೆ. ಅಗ್ನಿದುರಂತಗಳಲ್ಲಿ ಬದುಕುಳಿದವರು ಹಾಗೂ ಸಂಬಂಧಿಸಿದನಾಗರೀಕರು ಕಟ್ಟಿಕೊಂಡಿರುವ ಸಂಸ್ಥೆ ಬಿಯಾಂಡ್ ಕಾರ್ಲಟನ್. ಅಗ್ನಿದುರಂತಗಳಲ್ಲಿ ಮಡಿದವರ ಕುಟುಂಬಗಳಿಗೆ ನ್ಯಾಯ ಸಲ್ಲಿಸಲು ಹೋರಾಡುತ್ತಿರುವ ಸಂಸ್ಥೆ ಇದು. ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿದುರಂತ ಸಂಭವಿಸದಂತೆ ವಹಿಸುವ ಮುನ್ನೆಚ್ಚರಿಕೆ ಕ್ರಮಗಳ ಬಗೆಗೂ ಈ ಸಂಸ್ಥೆ ಅರಿವು ಮೂಡಿಸುತ್ತಿದೆ. id='are-slot-1' class='oiad oi-axt oiadv'> id='top-searched-articles'>ಸಂಗೀತದ
ಜೊತೆಜೊತೆಗೆ ಶನಿವಾರ ಸಂಜೆ ದೀಪ ಬೆಳಗುವ ಮೂಲಕವೂ ಕಾರ್ಲಟನ್ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಕಾರ್ಲಟನ್ ಬೆಂಕಿ ದುರಂತ ಸಂಭವಿಸಿ ಆಗಸ್ಟ್ ಗೆ ಆರು ತಿಂಗಳು ಕಳೆಯುತ್ತಿದೆ. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.











Click it and Unblock the Notifications